ಅಮೆರಿಕ: ಭಾರತೀಯ ಕೂಚಿಪುಡಿ ನೃತ್ಯಪಟುವನ್ನು ಗುಂಡಿಕ್ಕಿ ಹತ್ಯೆ

Prasthutha|

ಅಮೆರಿಕ: ಅಮೆರಿಕದಲ್ಲಿ ಭಾರತೀಯರ ಹತ್ಯೆ ಘಟನೆ ಮುಂದುವರೆದಿದ್ದು, ಭಾರತೀಯ ಕೂಚಿಪುಡಿ ನೃತ್ಯಪಟುವನ್ನು ಗುಂಡಿಕ್ಕಿ ಬರ್ಬರ ಹತ್ಯೆ ಮಾಡಲಾಗಿದೆ. ಅಮರನಾಥ್ ಘೋಷ್ ಮೃತರು.

- Advertisement -

ಮಿಸ್ಸೌರಿಯ ಸೇಂಟ್ ಲೂಯಿಸ್ ಸಿಟಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಭಾರತದಲ್ಲಿ ಸುದ್ದಿಯಾಗಿದೆ.

ಕಳೆದ ಫೆಬ್ರವರಿ 27 ರಂದು ಸೇಂಟ್ ಲೂಯಿಸ್ ಸಿಟಿಯಲ್ಲಿ ಸಂಜೆ ವೇಳೆ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಹತ್ಯೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ

- Advertisement -

ಮೃತರು ಕೊಲ್ಕತ್ತಾ ಮೂಲದವರಾಗಿದ್ದು, ಭರತನಾಟ್ಯ ನೃತ್ಯಪಟು ಆಗಿದ್ದರು. ಕೂಚಿಪುಡಿ ನೃತ್ಯದಲ್ಲೂ ಪರಿಣಿತಿ ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲೆ ತಂದೆಯನ್ನು ಕಳೆದುಕೊಂಡಿದ್ದ ಅಮರನಾಥ್ ಘೋಷ್ ಮೂರು ತಿಂಗಳ ಹಿಂದೆ ತಾಯಿಯನ್ನೂ ಅಗಲಿದ್ದರು. ಹಾಗಾಗಿ ಸ್ನೇಹಿತರ ಮನವಿ ಮೇರೆಗೆ ಅಮರನಾಥ್ ಘೋಷ್ ಅವರ ಮೃತ ದೇಹವನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ.



Join Whatsapp