ಬರೋಬ್ಬರಿ 130 ದಿನಗಳ ಕಾಲ ಸೋಂಕಿನೊಂದಿಗೆ ಹೋರಾಡಿ ಗುಣಮುಖನಾದ ಕೋವಿಡ್ ರೋಗಿ!

Prasthutha|

ಲಕ್ನೋ: ಕೊರೋನಾ ವೈರಸ್ ನೊಂದಿಗೆ ಬರೋಬ್ಬರಿ 130 ದಿನಗಳ ಸುದೀರ್ಘ ಹೋರಾಟ ನಡೆಸಿದ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ. ಉತ್ತರ ಪ್ರದೇಶದ ಮೀರತ್‌ ಮೂಲದ ವಿಶ್ವಾಸ್ ಸೈನಿ ಕೋವಿಡ್ ವಿರುದ್ಧದ ಯುದ್ಧವನ್ನು ಗೆಲ್ಲುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾನೆ. ಆದರೆ ಈಗಲೂ ಆಮ್ಲಜನಕವನ್ನು ಅವಲಂಬಿಸಿದ್ದಾನೆ .


‘ರೋಗಿಗೆ ಏಪ್ರಿಲ್ 28 ರಂದು ಕೋವಿಡ್ ಸೋಂಕು ತಗುಲಿ ಅವರ ಸ್ಥಿತಿ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಸೈನಿಯ ಆಮ್ಲಜನಕದ ಮಟ್ಟ 16 ಕ್ಕೆ ಇಳಿದಿದ್ದು ನಂತರ ಅವರನ್ನು ಒಂದು ತಿಂಗಳ ಕಾಲ ವೆಂಟಿಲೇಟರ್‌ನಲ್ಲಿ ಇಡಲಾಯಿತು. ‘ಅವರು ಏಪ್ರಿಲ್ 28 ರಂದು ಕೋವಿಡ್ ಪರೀಕ್ಷೆ ನಡೆಸಿದರು. ಆರಂಭದಲ್ಲಿ ಅವರನ್ನು ಮನೆಯಲ್ಲಿ ಇರಿಸಲಾಗಿತ್ತು . ಆದರೆ ನಂತರ ಅವರ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ನ್ಯೂಟೆಮಾ ಆಸ್ಪತ್ರೆಯಲ್ಲಿ ಸೈನಿಗೆ ಚಿಕಿತ್ಸೆ ನೀಡಿದ ಡಾ. ಅವ್ನೀತ್ ರಾಣಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.

- Advertisement -