ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು | ಮೋರಿಯಲ್ಲಿ ಕೋವಿಡ್ ಸೋಂಕಿತನ ಶವ ಪತ್ತೆ!

Prasthutha|

ಮೈಸೂರು :  ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಸರ್ಕಾರದ ನಿರ್ಲಕ್ಷ್ಯದಿಂದ ಹಲವಾರು ಜೀವಗಳು ಬಲಿಯಾಗುತ್ತಿದೆ. ಈ ನಡುವೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ನಡೆದಿದ್ದು, ಮೋರಿಯಲ್ಲಿ ಕೊರೊನಾ ಸೋಂಕಿತನ ಶವ ಪತ್ತೆಯಾಗಿದೆ. ಜಿಲ್ಲಾಸ್ಪತ್ರೆ ಸಿಬ್ಬಂದಿಗಳ ಇಂತಹಾ ಬೇಜವಾಬ್ಧಾರಿ ಕಾರ್ಯಕ್ಕೆ ಜನರು ಹಿಡಿಶಾಪ ಹಾಕಿದ್ದಾರೆ.

- Advertisement -

ಕೋವಿಡ್ ನಿಂದ ಬಳಲುತ್ತಿದ್ದ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಸುರೇಶ್ ಎಂಬುವವರನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸುರೇಶ್ ಏಕಾಏಕಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು, ಜಿಲ್ಲಾಸ್ಪತ್ರೆ ಸುರೇಶ್ ನಾಪತ್ತೆಯ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಆದರೆ ಇಂದು ರಸ್ತೆ ಪಕ್ಕದ ಮೋರಿಯಲ್ಲಿ ಸುರೇಶ್ ಶವ ಪತ್ತೆಯಾಗಿದೆ. ಮೋರಿಯಲ್ಲಿ ಶವ ಪತ್ತೆಯಾದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅನಾಥ ಶವವೆಂದು ಶವಾಗಾರಕ್ಕೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಕೊರೊನಾ ಸೋಂಕಿತ ಎಂದು ಗೊತ್ತಾಗದೆ ಯಾವುದೇ ನಿಯಮ ಪಾಲಿಸದೆ ಪೊಲೀಸರು ಸುರೇಶ್ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿ ಇರಿಸಿದ್ದಾರೆ ಎಂದು ಪೊಲೀಸರನ್ನೂ ಸಾರ್ವಜನಿಕರು ಟೀಕಿಸಿದ್ದಾರೆ.

Join Whatsapp