ದೇಶಾದ್ಯಂತ ಲಾಕ್ ಡೌನ್ ಹೇರಲು ಭಾರತಕ್ಕೆ ಸಲಹೆ ನೀಡಿದ ಅಮೆರಿಕ

Prasthutha|

ವಾಷಿಂಗ್ಟನ್:  ಭಾರತದಲ್ಲಿ ನಿಯಂತ್ರಣ ಕಳದುಕೊಂಡಿರುವ ಕೋವಿಡ್ ಸೋಂಕಿನಿಂದ ಅಪಾರ ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ, ದೇಶಾದ್ಯಂತ ಲಾಕ್ ಡೌನ್ ಹೇರಲು ಶಿಫಾರಸು ಮಾಡಿದ್ದಾರೆ.

- Advertisement -

ಭಾರತದಲ್ಲಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿರುವುದರಿಂದ ಸಾಮೂಹಿಕ ಲಸಿಕೆ ಅಭಿಯಾನ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞರಾಗಿರುವ ಡಾ. ಫೌಸಿ ಹೇಳಿದ್ದಾರೆ.

ಭಾರತದಲ್ಲಿ ಆಸ್ಪತ್ರೆಗಳು, ಬೆಡ್ , ಆಕ್ಸಿಜನ್ ಪೂರೈಕೆಯ ಕೊರತೆ ಇದೆ. ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ಹಾಕಬೇಕಾಗಿದೆ. ಆದ್ದರಿಂದ ಇತರ ರಾಷ್ಟ್ರಗಳು ಭಾರತದ ನೆರವಿಗೆ ನಿಲ್ಲಬೇಕಾಗಿದೆ. ಸದ್ಯದ ಪರಿಸ್ಥಿತಿಯನ್ನು ನೋಡುವಾಗ ದೇಶಾದ್ಯಂತ ಲಾಕ್ ಡೌನ್ ಮಾಡುವ ಅಗತ್ಯವಿದೆ. ಕಳೆದ ವರ್ಷ ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ರಾಷ್ಟ್ರಗಳು ನಿಗದಿತ ಅವಧಿವರೆಗೂ ಸಂಪೂರ್ಣ ಲಾಕ್ ಡೌನ್ ಮಾಡಿದ್ದರಿಂದ ಆ ರಾಷ್ಟ್ರಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆರು ತಿಂಗಳ ಕಾಲ ಲಾಕ್ ಡೌನ್ ಮಾಡಬೇಕಾಗಿಲ್ಲ, ಕೆಲವು ವಾರಗಳವರೆಗೂ ಲಾಕ್ ಡೌನ್ ಮಾಡಬೇಕಾಗಿದೆ. ಆಗ ಮಾತ್ರ ಸೋಂಕು ಹರಡದಂತೆ ಸ್ವಲ್ಪ ಮಟ್ಟಿಗೆ ತಡೆಗಟ್ಟಲು ಸಾಧ್ಯವಿರುತ್ತದೆ ಎಂದು ಡಾ. ಆಂಥೋನಿ ಫೌಸಿ ಭಾರತಕ್ಕೆ ಸಲಹೆ ನೀಡಿದ್ದಾರೆ.

Join Whatsapp