ಒಡಿಶಾದ ಪ್ರಾಚೀನ ಬುಡಕಟ್ಟು ಜನಾಂಗಗಳಲ್ಲಿ ಹರಡಿದ ಕೋವಿಡ್ | ಕಳವಳಕಾರಿ ವಿಷಯ ಎಂದ NCST

Prasthutha|

ಒಡಿಶಾದ ಎರಡು ಪ್ರಾಚೀನ ಬುಡಕಟ್ಟು ಜನಾಂಗದ ಆರು ಮಂದಿ ಸದಸ್ಯರಿಗೆ ಕೋವಿಡ್ -19 ಸೋಂಕು ತಗುಲಿರುವುದನ್ನು ದೃಢಪಡಿಸಿದ ಬಳಿಕ, ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗವು ರಾಜ್ಯ ಸರ್ಕಾರದಿಂದ ವರದಿಯನ್ನು ಕೋರಿದೆ.

- Advertisement -

ಆಗಸ್ಟ್ ತಿಂಗಳ ಕೊನೆಯಲ್ಲಿ ಬೋಂಡಾ ಬುಡಕಟ್ಟಿನ ಓರ್ವ ಸದಸ್ಯ ಮತ್ತು ದಿದಾಯಿ ಬುಡಕಟ್ಟಿನ ಐವರು ಸದಸ್ಯರಿಗೆ ಕೊರೋನ ಸೋಂಕು ತಗುಲಿರುವುದು ದೃಢವಾಗಿತ್ತು. ಈ ಕುರಿತು ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದ್ದು, “ಇದು ಗಂಭೀರ ಚಿಂತಾಜನಕ ವಿಷಯ” ಎಂಬುದಾಗಿ ಬೆಟ್ಟುಮಾಡಿದೆ.

“ಸೋಂಕಿಗೆ ಅನೇಕ ಮೂಲಗಳು ಇರಬಹುದು. ಸದಸ್ಯರು ವಾರಾತ್ಯಂದ ಗ್ರಾಮೀಣ ಮಾರುಕಟ್ಟೆಗಳಿಗೆ ಹೋಗುತ್ತಾರೆ. ಅವರಲ್ಲಿ ಕೆಲವರು ಇತರ ಜಿಲ್ಲೆಗಳಿಂದಲೂ ಮರಳಿದ್ದಾರೆ. ಆದ್ದರಿಂದ ಸೋಂಕಿನ ನಿರ್ದಿಷ್ಟ ಮೂಲವನ್ನು ಅರಿಯುವುದು ಕಷ್ಟಕರ. ಆದಾಗ್ಯೂ, ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲಾಗಿದೆ ” ಎಂದು ಮಲ್ಕಾಂಗಿರಿ ಕಲೆಕ್ಟರ್ ಮನೀಶ್ ಅಗರ್ವಾಲ್ ಹೇಳಿದ್ದಾರೆ.

- Advertisement -

ಪಿವಿಟಿಜಿ ಎಂಬುದು ಭಾರತ ಸರಕಾರವು (ಈ ಹಿಂದೆ, ಪ್ರಾಚೀನ ಬುಡಕಟ್ಟು ಗುಂಪು) ಬುಡಕಟ್ಟು ಜನಾಂಗದವರಿಗೆ ಅವರ ದೈಹಿಕ ಪ್ರತ್ಯೇಕತೆ, ಕ್ಷೀಣಿಸುತ್ತಿರುವ ಜನಸಂಖ್ಯೆ, ಕಡಿಮೆ ಮಟ್ಟದ ಸಾಕ್ಷರತೆ ಮತ್ತು ಬೇಟೆಯಾಡುವಿಕೆ, ಆಹಾರ ಸಂಗ್ರಹಣೆ ಇತ್ಯಾದಿಗಳ ಆಧಾರದ ಮೇಲೆ ನಿರ್ಮಿಸಿದ ಹೊಸ ವಿಂಗಡಣೆಯಾಗಿದೆ.

ಒಡಿಶಾದ 62 ಬುಡಕಟ್ಟು ಗುಂಪುಗಳಲ್ಲಿ 13 ಪಿವಿಟಿಜಿಎಸ್ ಎಂಬುದಾಗಿ ಗುರುತಿಸಲ್ಪಟ್ಟಿವೆ. ಪ್ರಸ್ತುತ, ಒಡಿಶಾದಲ್ಲಿ ಪಿವಿಟಿಜಿಗಳಿಗೆ ಸೇರಿದ 2.5 ಲಕ್ಷ ಜನಸಂಖ್ಯೆ ಇದ್ದು, ಅವರು 11 ಜಿಲ್ಲೆಗಳ ಸುಮಾರು 1,429 ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ.

Join Whatsapp