September 22, 2020

ಪ್ರಧಾನಿ ಮೋದಿಯಿಂದ 2015ರಲ್ಲಿ 58 ದೇಶಗಳ ಭೇಟಿಗೆ ₹ 517 ಕೋಟಿ ಖರ್ಚು: ಕೇಂದ್ರ

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ 58 ದೇಶಗಳಿಗೆ ಭೇಟಿ ನೀಡಿದ್ದು, ಈ ಪ್ರಯಾಣಕ್ಕಾಗಿ ಒಟ್ಟು ₹ 517 ಕೋಟಿ ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ವಿದೇಶಾಂಗ ಖಾತೆಗಳ ರಾಜ್ಯ ಸಚಿವ ವಿ.ಮುರಳೀಧರನ್‌ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ, 2015 ರಲ್ಲಿ ಪ್ರಧಾನ ಮಂತ್ರಿಯವರ ವಿದೇಶ ಪ್ರವಾಸಗಳ ವಿವರಗಳನ್ನು ಒದಗಿಸಿದ್ದಾರೆ. “ಈ ಭೇಟಿಗಳಿಗಾಗಿ ಒಟ್ಟು ₹ 517.82 ಕೋಟಿ” ಖರ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಮುರಳೀಧರನ್‌ ಒದಗಿಸಿದ ವಿವರಗಳ ಪ್ರಕಾರ, ಪ್ರಧಾನಿಯವರು ಅಮೇರಿಕ, ರಷ್ಯಾ ಮತ್ತು ಚೀನಾಕ್ಕೆ ತಲಾ ಐದು ಬಾರಿ ಭೇಟಿ ನೀಡಿದ್ದು, ಸಿಂಗಾಪುರ, ಜರ್ಮನಿ, ಫ್ರಾನ್ಸ್, ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ಕೆಲವು ದೇಶಗಳಿಗೆ ಅನೇಕ ಬಾರಿ ಪ್ರವಾಸ ಕೈಗೊಂಡಿದ್ದಾರೆ.

ಟಾಪ್ ಸುದ್ದಿಗಳು