40ಲಕ್ಷ ದಾಟಿದ ಕೋವಿಡ್ ಸಾವು| ಅಚ್ಚರಿ ಮೂಡಿಸುತ್ತಿದೆ ಜಾಗತಿಕ ಅಂಕಿ ಅಂಶಗಳು!

Prasthutha|

ವಾಷಿಂಗ್ಟನ್: ವಿಶ್ವಾದ್ಯಂತ ಕೋವಿಡ್ ಸಾವಿನ ಸಂಖ್ಯೆ 40 ಲಕ್ಷ ಮೀರಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

- Advertisement -

1982 ರಿಂದೀಚೆಗೆ ವಿಶ್ವದಾದ್ಯಂತ ನಡೆದ ಯುದ್ಧಗಳಲ್ಲಿ ಕೊಲ್ಲಲ್ಪಟ್ಟ ಒಟ್ಟು ಜನರ ಸಂಖ್ಯೆಗಿಂತ ಹೆಚ್ಚಿನ ಜನ ಕಳೆದ ಒಂದೂವರೆ ವರ್ಷಗಳಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಪೀಸ್ ರಸರ್ಚ್ ಇನ್ಸ್ಟಿಟ್ಯೂಟ್ ನಡೆಸಿದ ಅಧ್ಯಯನ ವರದಿ ಮಾಡಿದೆ.

ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿರುವ ಜನರಿಗಿಂತ ಮೂರು ಪಟ್ಟು ಹೆಚ್ಚು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ರಿಸರ್ಚ್ ಇನ್ಸ್ಟಿಟ್ಯೂಟ್ ಅಧ್ಯಯನ ವರದಿ ತಿಳಿಸಿದೆ. ಅಮೆರಿಕ ಮತ್ತು ಬ್ರಿಟನ್ಗಳಲ್ಲಿ ವ್ಯಾಕ್ಸಿನೇಷನ್ ಯಶಸ್ವಿಯಾಗಿದ್ದರೂ, ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರಿ ಇತರ ದೇಶಗಳಿಗೆ ವೇಗವಾಗಿ ಹರಡುತ್ತಿದೆ ಎಂದು ಸಿಡಿಸಿ ಸೇರಿದಂತೆ ಆರೋಗ್ಯ ರಕ್ಷಣಾ ಸಂಸ್ಥೆಗಳು ಈ ನಡುವೆ ಆತಂಕ ವ್ಯಕ್ತಪಡಿಸಿದೆ.

- Advertisement -

ಲಸಿಕೆ ನೀಡುವುದರೊಂದಿಗೆ ವಿಶ್ವದಾದ್ಯಂತ ಪ್ರತಿದಿನ ಸಾವನ್ನಪ್ಪುವವರ ಸಂಖ್ಯೆ 18,000 ಕ್ಕಿಂತ 7,900 ಕ್ಕೆ ಇಳಿದಿದೆ ಎಂದು ಬ್ರಿಟನ್ ಮತ್ತು ಇಸ್ರೇಲ್ ಹೇಳಿದೆ. ವಿಶ್ವಾದಾದ್ಯಂತ ಕೋವಿಡ್ ಕಾರಣ ಅತಿ ಹೆಚ್ಚು ಸಾವು ಸಂಭವಿಸಿದ ದೇಶ ಅಮೆರಿಕ(6,00,000) ಎರಡನೇ ಸ್ಥಾನವನ್ನು ಬ್ರೆಝಿಲ್(5,20,000) ಪಡೆದಿದೆ.

Join Whatsapp