ನ್ಯಾಯಾಲಯಗಳು ಜನರನ್ನು ತಲುಪುವಂತಾಗಬೇಕು: ಸಿಜೆಐ ಚಂದ್ರಚೂಡ್

Prasthutha|

ನವದೆಹಲಿ: ನ್ಯಾಯಾಂಗ ವ್ಯವಸ್ಥೆಯು ದೇಶದ ಜನರನ್ನು ತಲುಪುವುದು ಅತ್ಯಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್’ನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.

ಸಂವಿಧಾನ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದ ಮೂಲ ಸೌಕರ್ಯವನ್ನು ಕಿತ್ತುಹಾಕಬಾರದು. ಅದೇ ರೀತಿ ಎಲ್ಲರಿಗೂ ನ್ಯಾಯವನ್ನು ಒದಗಿಸುವ ಅಗತ್ಯವಿದೆ ಎಂದು ಹೇಳಿದರು.

- Advertisement -

ನಮ್ಮಂತಹ ವೈವಿಧ್ಯಮಯ ರಾಷ್ಟ್ರದಲ್ಲಿ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಪ್ರಮುಖ ಸವಾಲು ಅಂದರೆ ಎಲ್ಲರಿಗೂ ನ್ಯಾಯ ಸಿಗುವುದು. ನ್ಯಾಯ ವ್ಯವಸ್ಥೆಯನ್ನು ಸುಧಾರಿಸಲು ಭಾರತೀಯ ನ್ಯಾಯಾಂಗ ಅನೇಕ ವಿಷಯಗಳನ್ನು ಪರಿಚಯಿಸಿದೆ ಎಂದು ಅವರು ವಿವರಿಸಿದರು.

ಅಂಚಿನಲ್ಲಿರುವ ಸಮುದಾಯಗಳ ಪ್ರಾತಿನಿಧ್ಯವನ್ನು ವಕೀಲ ವೃತ್ತಿಯಲ್ಲಿ ಹೆಚ್ಚಿಸಬೇಕು ಎಂದು ಸಿಜೆಐ ಚಂದ್ರಚೂಡ್ ಅವರು ನಾಗರಿಕರಲ್ಲಿ ಮನವಿ ಮಾಡಿದರು.

ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆ ಶೇಕಡಾ 100 ರಷ್ಟು ಪರಿಪೂರ್ಣವಲ್ಲ ಮತ್ತು ನ್ಯಾಯಾಧೀಶರ ನೇಮಕಕ್ಕೆ ಅನುಸರಿಸುವ ಕೊಲಿಜಿಯಂ ವ್ಯವಸ್ಥೆಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (ಸಿಜೆಐ) ತಿಳಿಸಿದ್ದಾರೆ.

ನ್ಯಾಯಮೂರ್ತಿಗಳು ಸಂವಿಧಾನವನ್ನು ಅನುಷ್ಠಾನಗೊಳಿಸುವ ನಿಷ್ಠಾವಂತ ಯೋಧರು ಎಂದ ಅವರು, ಇತ್ತೀಚೆಗೆ ಕೊಲಿಜಿಯಂ ವಿರುದ್ಧ ವಿವಿಧ ವಲಯಗಳಿಂದ ಬಂದ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಹೀಗೆ ನುಡಿದರು.

ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠವು ಫೆಬ್ರವರಿ 2020 ರಲ್ಲಿ ಸಶಸ್ತ್ರ ಪಡೆಗಳಲ್ಲಿನ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ನೀಡುವ ಮಹತ್ವದ ತೀರ್ಪು ನೀಡಿತ್ತು. ಹೀಗಾಗಿ ನ್ಯಾಯಾಧೀಶರ ಕಚೇರಿಯನ್ನು ಯುವ ವಕೀಲರನ್ನು ಆಕರ್ಷಿಸುವ ವ್ಯವಸ್ಥೆ ಮಾಡಬೇಕಿದೆ ಎಂದು ಸಿಜೆಐ ಚಂದ್ರಾಚೂಡ್ ಅವರು ತಿಳಿಸಿದರು.

- Advertisement -