ಡಿಕೆಶಿ ದುಬೈಗೆ ಹೋಗಲು ಅನುಮತಿ ನೀಡಿದ ಕೋರ್ಟ್

Prasthutha|

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವೈಯಕ್ತಿಕ ಕೆಲಸದ ಮೇಲೆ ಡಿ.1ರಿಂದ 8ರವರೆಗೆ ದುಬೈಗೆ ತೆರಳಲು ಇಲ್ಲಿನ ವಿಶೇಷ ನ್ಯಾಯಾಲಯ ಶನಿವಾರ ಅನುಮತಿ ನೀಡಿದೆ. ಡಿಸೆಂಬರ್ 1 ರಿಂದ 8 ರತನಕ ವಿವಿಧ ಕಾರ್ಯಕ್ರಮಗಳು, ಬಿಜಿನೆಸ್ ಮೀಟ್ ಭಾಗಿಯಾಗಬೇಕಿರುವ ಕಾರಣಕ್ಕೆ ದುಬೈಗೆ ತೆರಳಲು ಅವಕಾಶ ಕೊಡಿ ಎಂದು ಡಿ.ಕೆ.ಶಿವಕುಮಾರ್ ನವೆಂಬರ್ 23 ರಂದು ಅರ್ಜಿ ಸಲ್ಲಿಸಿದ್ದರು.

- Advertisement -

ಅರ್ಜಿ ವಿಚಾರಣೆ ವೇಳೆ ಆರೋಪಿ ಡಿ.ಕೆ. ಶಿವಕುಮಾರ್ ಬಹಳ ಪ್ರಭಾವಶಾಲಿಗಳಾಗಿದ್ದು ಸಾಕ್ಷ್ಯಗಳ ಮೇಲೆ ಪ್ರಭಾವಬೀರುವ ಮತ್ತು ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಅವರು ಸಲ್ಲಿಸಿರುವ ಅರ್ಜಿಯಲ್ಲಿ ತುರ್ತಾಗಿ ಹೋಗಲೇಬೇಕು ಎನ್ನುವ ಅಂಶ ಕಾಣುತ್ತಿಲ್ಲ. ಅಲ್ಲದೇ ದುಬೈ ಪ್ರವಾಸದ ಬಗ್ಗೆ ಸ್ಪಷ್ಟ ವಿವರಗಳು ಅರ್ಜಿಯಲ್ಲಿ ಉಲ್ಲೇಖ ಮಾಡದಿರುವುದರಿಂದ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಇಡಿ ಪರ ವಕೀಲರು ವಾದ ಮಂಡಿಸಿದರು. ಬೆಂಗಳೂರಿನ ವಿಶೇಷ ನ್ಯಾಯಾಲಯ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದೆ.

ಡಿ.ಕೆ ಶಿವಕುಮಾರ್‌ ಅವರ ಸಫ್ದರ್‌ಜಂಗ್‌ ಅಪಾರ್ಟ್‌ಮೆಂಟ್‌ನಲ್ಲಿ 8.59 ಕೋಟಿ ನಗದು ವಶಕ್ಕೆ ಪಡೆದ ನಂತರ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Join Whatsapp