ಭಾರತವನ್ನು ಆಹ್ವಾನಿಸದೆ 19 ರಾಷ್ಟ್ರಗಳೊಂದಿಗೆ ಸಭೆ ನಡೆಸಿದ ಚೀನಾ

Prasthutha|

ಬೀಜಿಂಗ್‌: ಭಾರತವನ್ನು ಆಹ್ವಾನಿಸದೆ 19 ರಾಷ್ಟ್ರಗಳೊಂದಿಗೆ ಚೀನಾ ಸಭೆ ನಡೆಸಿರುವ ಬಗ್ಗೆ ವರದಿಯಾಗಿದೆ.

- Advertisement -

ಹಿಂದೂ ಮಹಾಸಾಗರದ ಪ್ರದೇಶದ 19 ರಾಷ್ಟ್ರಗಳ ಜೊತೆ ಅಭಿವೃದ್ಧಿ ವಿಚಾರವಾಗಿ ಚೀನಾ ಈ ವಾರ ಸಭೆ ನಡೆಸಿದ್ದು, ಭಾರತದ ಅನುಪಸ್ಥಿತಿ ಗಮನಾರ್ಹವಾಗಿತ್ತು.

ಚೀನಾದ ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕವಿರುವ ಚೀನಾ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಕೋಆಪರೇಷನ್ ಏಜೆನ್ಸಿಯು  (ಸಿಐಡಿಸಿಎ) ನವೆಂಬರ್‌ 21 ರಂದು ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್‌ನಲ್ಲಿ ಈ ಸಭೆ ನಡೆಸಿದ್ದು, ಇದರಲ್ಲಿ 19 ರಾಷ್ಟ್ರಗಳು ಭಾಗವಹಿಸಿದ್ದವು ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.

Join Whatsapp