ವಿಜಯ್ ಮಲ್ಯ ಆಸ್ತಿ ಹರಾಜಿಗೆ ಬ್ಯಾಂಕುಗಳಿಗೆ ನ್ಯಾಯಾಲಯದಿಂದ ಅನುಮತಿ

Prasthutha|

ಹೊಸದಿಲ್ಲಿ : ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿ ದೇಶ ಬಿಟ್ಟು ಪಲಾಯನ ಮಾಡಿದ ಉದ್ಯಮಿ ವಿಜಯ್ ಮಲ್ಯ ಹೆಸರಿನಲ್ಲಿರುವ ಆಸ್ತಿ ಹರಾಜು ಮಾಡಲು ಬ್ಯಾಂಕುಗಳಿಗೆ ನ್ಯಾಯಾಲಯ ಅನುಮತಿ ನೀಡಿದೆ.

- Advertisement -

ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ) ವಶಪಡಿಸಿಕೊಂಡ ಆಸ್ತಿಗಳನ್ನು ಹರಾಜು ಮಾಡಲು ಪ್ರಿವೆಂಶನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್ (ಪಿಎಂಎಲ್ಎ) ನ್ಯಾಯಾಲಯ ಅನುಮತಿ ನೀಡಿದೆ. ಭಾರತದ 17 ಬ್ಯಾಂಕುಗಳಿಂದ 9000 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆಂದು ವಿಜಯ್ ಮಲ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಲ್ಯ ಅವರ 5600 ಕೋಟಿ ರೂ.ಗಳ ಸಾಲದ ಮೊತ್ತವನ್ನು ವಿಧಿಸುವ ಪ್ರಕ್ರಿಯೆಯ ಭಾಗವಾಗಿದೆ ನ್ಯಾಯಾಲಯದ ಈ ಆದೇಶ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ರಾವ್ ಹೇಳಿದ್ದಾರೆ.



Join Whatsapp