ರಸ್ತೆ ಅಪಘಾತ: ವ್ಯಾಪಾರಕ್ಕೆ ತೆರಳುತ್ತಿದ್ದ ದಂಪತಿ ಮೃತ್ಯು

Prasthutha|

ತುಮಕೂರು: ಗೂಡ್ಸ್ ಆಟೋ ಮತ್ತು ಮಾರುತಿ ಕಾರಿನ ನಡುವೆ ಅಪಘಾತ ಸಂಭವಿಸಿ ದಂಪತಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಸಮೀಪದ ಹರಿವೇಸಂದ್ರ ಬಳಿ ನಡೆದಿದೆ.

- Advertisement -


ಕಲ್ಲೂರು ನಾಗರಾಜ್ (60) ಮತ್ತು ಅವರ ಪತ್ನಿ ಮೃತರು.


ಕೆಜಿ ಟೆಂಪಲ್ ನ ವಾರದ ಸಂತೆಗೆ ಸರಕುಗಳನ್ನು ಹೊತ್ತು ಗೂಡ್ಸ್ ಟೆಂಪೊದಲ್ಲಿ ಕಲ್ಲೂರು ನಾಗರಾಜ್ ದಂಪತಿ ಸಾಗುತ್ತಿದ್ದರು. ಈ ವೇಳೆ ಹರಿವೇಸಂದ್ರದಲ್ಲಿ ಆಟೊ ಮತ್ತು ಮಾರುತಿ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಅವರಿಬ್ಬರೂ ರಸ್ತೆಗೆ ಉರುಳಿಬಿದ್ದರು. ನಾಗರಾಜ್ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ಗಾಯಾಳು ಪತ್ನಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಸ್ಥಳಕ್ಕೆ ಸಿ.ಎಸ್.ಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

Join Whatsapp