ಬೆಂಗಳೂರು: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಶೇ.99ರಷ್ಟು ಜನ ಕೋರ್ಟ್ ಆದೇಶ ಪಾಲಿಸಿದ್ದಾರೆ. ಸಮವಸ್ತ್ರ ಒಪ್ಪಿಕೊಂಡು ಪರೀಕ್ಷೆ ಬರೆದಿದ್ದಾರೆ. ಆದರೆ ಶೇ.1ರಷ್ಟು ಜನರ ಈ ವಿಷಯವನ್ನು ಜೀವಂತವಾಗಿರಿಸಲು ಬಯಸುತ್ತಾರೆ. ಕ್ಯಾಮೆರಾ ತಮ್ಮ ಕಡೆ ತಿರುಗಿಸುವ ಸಲುವಾಗಿ ಇವರು ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಹುಬ್ಬಳ್ಳಿ ಹಿಂಸಾಚಾರದ ಕುರಿತು ಮಾತನಾಡಿ, ಹುಬ್ಬಳ್ಳಿ ಗಲಾಟೆ ಅಚಾನಕ್ಕಾಗಿ ಆಗಿರುವ ಸಂಗತಿಯಲ್ಲ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆಗೂ ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆ ಇದೆ. ದೇಶದ ಉದ್ದಗಲಕ್ಕೂ ಗಲಭೆ ಎಬ್ಬಿಸುವ ಷಡ್ಯಂತ್ರ ನಡೆದಿದೆ. ಇದೆಲ್ಲವನ್ನು ನೋಡಿದಾಗ ಅವರು ಜಿನ್ನಾ ಮಾನಸಿಕತೆಯಲ್ಲಿ ಇರುವುದು ಸ್ಪಷ್ಟ. ಇದನ್ನು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು ಎಂದರು
ಜಿನ್ನಾ ಮಾನಸಿಕತೆಯನ್ನು ಗಾಂಧಿ ಮಾನಸಿಕತೆಯಲ್ಲಿ ಎದುರಿಸಲು ಸಾಧ್ಯವಿಲ್ಲ. ಗಾಂಧಿ ಮಾನಸಿಕತೆಯಲ್ಲಿ ಎದುರಿಸಿದಾಗ ದೇಶ ವಿಭಜನೆಯಯಾಯಿತು. ಇಂತಹ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು. ಆಗ ಮಾತ್ರ ದೇಶ ಉಳಿಸಿಕೊಳ್ಳಲು ಸಾಧ್ಯ ಎಂದರು.