ಮಂಗಳೂರು : ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದ ಬಳಿಯಿರುವ ನರ್ಸಿಂಗ್ ಕಾಲೇಜಿಗೆ ಪರೀಕ್ಷೆ ಬರೆಯಲು ಆಗಮಿಸಿದ 40 ವಿದ್ಯಾರ್ಥಿಗಳಿಗೆ ಕೊರೊನ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಮತ್ತು ಕಾಲೇಜನ್ನು ಸೀಲ್ ಡೌನ್ ಮಾಡಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿದ್ದಾರೆ.
ಆಲಿಯಾ ಇನ್ಸ್ ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿಗೆ ಪರೀಕ್ಷೆ ಬರೆಯಲು ಕೇರಳದಿಂದ ಆಗಮಿಸಿದ 40 ವಿದ್ಯಾರ್ಥಿಗಳಿಗೆ ಕೊರೊನ ಪಾಸಿಟಿವ್ ಕಂಡು ಬಂದಿದೆ. 100 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜನ್ನು ಸೀಲ್ ಡೌನ್ ಮಾಡುವಂತೆ ಅಧಿಕಾರಿಗಳು ಬುಧವಾರ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಉಳ್ಳಾಲ ನಗರಸಭೆ ಅಧಿಕಾರಿಗಳು ಆಸ್ಪತ್ರೆ ಮತ್ತು ಕಾಲೇಜನ್ನು ಸೀಲ್ ಡೌನ್ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.