ಕೊಡಗಿನಲ್ಲಿ ಮತ್ತೆ ಕೊರೋನಾ ಹೆಚ್ಚಳ: ಶಾಲೆ-ಕಾಲೇಜುಗಳಲ್ಲೇ ಹೆಚ್ಚು ಪ್ರಕರಣ ದೃಢ

Prasthutha|

ಕೊಡಗು: ಕೊಡಗು ಜಿಲ್ಲೆಯಲ್ಲಿ ಶನಿವಾರ ಮತ್ತೆ ಕೊರೋನಾ ಮಹಾಸ್ಫೋಟ ಸಂಭವಿಸಿದ್ದು, ಕಳೆದ 24 ಗಂಟೆಗಳಲ್ಲಿ 497 ಹೊಸ ಪ್ರಕರಣಗಳು ದೃಢಪಟ್ಟಿವೆ.

- Advertisement -


ಪಾಸಿಟಿವಿಟಿ ದರದಲ್ಲಿ ಮಡಿಕೇರಿ ತಾಲೂಕು ಅತಿ ಹೆಚ್ಚು ಅಂದರೆ 16.95ರಷ್ಟು ದೃಢಪಟ್ಟಿದ್ದರೆ, ಸೋಮವಾರಪೇಟೆ ತಾಲೂಕಿನಲ್ಲಿ ಶೇ.16.45 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಶೇ.5.65ರಷ್ಟು ಪ್ರಕರಣಗಳು ಕಂಡುಬಂದಿವೆ.ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟಾರೆ ಪಾಸಿಟಿವಿಟಿ ದರ ಶೇ.11.70ರಷ್ಟಾಗಿದೆ.


ಜಿಲ್ಲೆಯಲ್ಲಿ ಹೆಚ್ಚಾಗಿ ಶಾಲೆ, ಕಾಲೇಜು, ಹಾಸ್ಟೆಲ್’ಗಳಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಕಳೆದ 24ಗಂಟೆಗಳಲ್ಲಿ ಪೊನ್ನಂಪೇಟೆಯ ಇಂಜಿನಿಯರಿಂಗ್ ಕಾಲೇಜು,ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಶಾಲೆ,ಮೂರ್ನಾಡು ಪಿಯು ಕಾಲೇಜು,ಕುಶಾಲನಗರ ನೇತಾಜಿ ಬಡಾವಣೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ, ನಾಪೋಕ್ಲು ಶ್ರೀರಾಮ ಟ್ರಸ್ಟ್ ಶಾಲೆ, ಸೋಮವಾರಪೇಟೆ ಸೈಂಟ್ ಜೋಸೆಫರ ಶಾಲೆ, ಆಲೂರು ಸಿದ್ದಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಸೋಂಕು ಪತ್ತೆಯಾಗಿದೆ.

- Advertisement -

ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 38,502ರಷ್ಟಾಗಿದ್ದು, ಒಟ್ಟು 36,087ಮಂದಿ ಸೋಂಕು ಮುಕ್ತರಾದಂತಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ 1977 ಸಕ್ರಿಯ ಪ್ರಕರಣ, 224 ಕಂಟೈನ್’ಮೆಂಟ್ ವಲಯಗಳು ಇರುವುದಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ತಿಳಿಸಿದ್ದಾರೆ.

Join Whatsapp