ಬೆಂಗಳೂರು : ಕೆಜಿಎಫ್ 2 ಚಿತ್ರದ ಹಾಡನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಬಳಸಿದ್ದಾರೆಂಬ ಕಾಪಿ ರೈಟ್ ಆರೋಪದ ಮೇರೆಗೆ ಕಾಂಗ್ರೆಸ್ ನ ಟ್ವಿಟರ್ ಖಾತೆಯನ್ನು ನಿರ್ಬಂಧಿಸುವಂತೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಆದೇಶವನ್ನು ನೀಡಿದೆ.
ಕೆಜಿಎಫ್ ಚಿತ್ರ ನಿರ್ಮಾಪಕರ ಅನುಮತಿಯಿಲ್ಲದೆ ಅದರ ಹಾಡೊಂದನ್ನು ಬಳಸಿದ್ದಕ್ಕೆ ಕೆಜಿಎಫ್ ತಂಡವು ಕಾಂಗ್ರೆಸ್ ನ ಈ ನಡೆಯ ವಿರುದ್ಧ ದೂರು ಸಲ್ಲಿಸುತ್ತು. ಇದರ ಮುಂದುವರಿದ ಭಾಗವಾಗಿ ಮುಂದಿನ ವಿಚಾರಣೆ ನಡೆಯುವವರೆಗೆ ಕಾಂಗ್ರೆಸ್ ನ ಟ್ವಿಟರ್ ಅಕೌಂಟ್ ಬ್ಲಾಕ್ ಮಾಡಲು ನ್ಯಾಯಾಲಯ ಆದೇಶಿಸಿದೆ.
ಈ ವಿಚಾರಣೆಯನ್ನು ನಡೆಸಿದ ನ್ಯಾಯಧೀಶೆ ಲತಾ ಕುಮಾರಿ ಹಾಡನ್ನು ಪೋಸ್ಟ್ ಮಾಡಲಾದ ಐಎನ್ ಸಿ ಖಾತೆಯನ್ನು ಮತ್ತು ಸಂಬಂಧಿತ ಮೂರು ಟ್ವೀಟ್ ಗಳನ್ನು ತೆಗೆದುಹಾಕುವಂತೆ ಟ್ವಿಟರ್ ಗೆ ಸೂಚಿಸಿದ್ದಾರೆ.