‘ಸ್ವ ಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದ್ದೇನೆ, ಯಾರ ಬಲವಂತವೂ ಇಲ್ಲ’: ಹೈಕೋರ್ಟ್ ಗೆ ಯುವತಿ ಸ್ಪಷ್ಟನೆ

Prasthutha|

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬಲವಂತದಿಂದ ಅಪಹರಿಸಿ ಮತಾಂತರಗೊಳಿಸಲಾಗಿದೆ ಎನ್ನಲಾದ ಪ್ರಕರಣದಲ್ಲಿ ಇಸ್ಲಾಮ್ ಸ್ವೀಕರಿಸಿದ ಯುವತಿಯೊಬ್ಬಳು ಆರೋಪಗಳನ್ನು ನಿರಾಕರಿಸಿ ಕೋರ್ಟಿನ ಮೊರೆ ಹೋಗಿದ್ದು, ತಾನು ಇಸ್ಲಾಮ್ ಧರ್ಮವನ್ನು ಮತಾಂತರಗೊಂಡಿದ್ದು ಬಲವಂತದಿಂದಲ್ಲ. ತನ್ನ ಇಚ್ಛೆಯಿಂದಲೇ ಮತಾಂತರಗೊಂಡಿದ್ದೇನೆ ಎಂದು ಹೈಕೋರ್ಟಿನಲ್ಲಿ ಅಫಿದಾವಿತ್ ಸಲ್ಲಿಸಿದ್ದಾಳೆ.

- Advertisement -

ಜಮ್ಮು ಕಾಶ್ಮೀರದಲ್ಲಿ ಹದಿನೆಂಟು ವರ್ಷದ ಇಬ್ಬರು ಯುವತಿಯರು ಊರು ಬಿಟ್ಟು ಮುಸ್ಲಿಂ ಯುವಕರನ್ನು ಮದುವೆಯಾಗಿದ್ದು, ಈ ಹಿನ್ನೆಲೆಯಲ್ಲಿ ಯುವತಿಯರನ್ನು ಬಲವಂತದಿಂದ ಅಪಹರಿಸಿ ಮತಾಂತರಗೊಳಿಸಲಾಗಿದೆ ಎಂದು ಆರೋಪಿಸಿ ಸಿಖ್ ಸಂಘಟನೆಗಳು ಪ್ರತಿಭಟಿಸಿ ಮದುವೆಯನ್ನು ಅಸಿಂಧುಗೊಳಿಸಬೇಕೆಂದು ಆಗ್ರಹಿಸಿದ್ದವು. ಈ ಆರೋಪವನ್ನು ನಿರಾಕರಿಸಿ ಹೈಕೋರ್ಟ್ ಮೆಟ್ಟಿಲೇರಿದ ಯುವತಿ, ತಮ್ಮ ಇಚ್ಛೆಯಿಂದ ಮತಾಂತರಗೊಂಡು ಮದುವೆಯಾಗಿದ್ದೇವೆ ತಮ್ಮನ್ನು ಯಾರೂ ನಮ್ಮನ್ನು ಮತಾಂತರಗೊಳ್ಳಲು ಒತ್ತಾಯಿಸಿಲ್ಲ ಎಂದು ಕೋರ್ಟಿಗೆ ತಿಳಿಸಿದ್ದಾಳೆ.

ಈ ಕುರಿತು ವಾದ ಆಲಿಸಿದ ಕೋರ್ಟ್ ಯುವತಿಯರನ್ನು ಕುಟುಂಬದ ಕೈಗೊಪ್ಪಿಸಿದ್ದು, ಯುವತಿಯರು ತಮ್ಮ ಇಚ್ಛೆಯಂತೆ ತೀರ್ಮಾನ ಮಾಡಬಹುದು. ಪೊಲೀಸರು ಒತ್ತಡ ಹೇರಬಾರದೆಂದು ಹೇಳಿದೆ.

- Advertisement -

 ಈ ಕುರಿತು ಪ್ರತಿಕ್ರಿಯಿಸಿದ ಜಮ್ಮು ಕಾಶ್ಮೀರ ಗ್ರ್ಯಾಂಡ್ ಮುಫ್ತಿ ನಾಸಿರುಲ್ ಇಸ್ಲಾಮ್, ಇಸ್ಲಾಮ್ ಧರ್ಮದಲ್ಲಿ ಬಲವಂತದ ಮತಾಂತರವಿಲ್ಲ. ತಮ್ಮ ಇಚ್ಛೆಯಿಂದ ಇಸ್ಲಾಂ ಸ್ವೀಕರಿಸುವುದಾದರೆ ಇಷ್ಟ ಪ್ರಕಾರ ತೀರ್ಮಾನ ತೆಗೆದುಕೊಳ್ಳಬಹುದು. ಈ ಪ್ರಕರಣದಲ್ಲಿ ನಿಷ್ಪಕ್ಷವಾದ ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿದ್ದಾರೆ.



Join Whatsapp