‘ಹಿಂದೂ ದೇವಾಲಯ ಮುಟ್ಟಿದರೆ ಬೀದಿಯಲ್ಲಿ ಡಿಸಿ, ತಹಶೀಲ್ದಾರ್ ಹೆಣ ಬೀಳುತ್ತೆ’: ವಿವಾದಾತ್ಮಕ ಹೇಳಿಕೆ ನೀಡಿದ ಹಿಂದೂ ಜಾಗರಣ ವೇದಿಕೆ ಮುಖಂಡ

Prasthutha|

ದಾವಣಗೆರೆ: ಹಿಂದೂ ದೇವಾಲಯ ಮುಟ್ಟಿದರೆ ಬೀದಿಯಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಹೆಣ ಬೀಳುತ್ತೆ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ಎಸಿ ಕಚೇರಿ ಮುಂಭಾಗ ದೇವಸ್ಥಾನ ತೆರವು ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಸತೀಶ್‌ಪೂಜಾರಿ, ಜಿಲ್ಲಾಧಿಕಾರಿಯಾಗಲಿ, ತಹಶೀಲ್ದಾರ್ ಆಗಲಿ, ದೇವಾಲಯ ತೆರವುಗೊಳಿಸುವ ಪ್ರವೃತ್ತಿ ಮುಂದುವರೆದರೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನಡು ಬೀದಿಯಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಇಬ್ಬರ ಹೆಣವನ್ನು ಬೀಳಿಸಲು ಕೂಡ ಹೇಸುವುದಿಲ್ಲ ಎಂದು ಹೇಳಿದ್ದಾರೆ.

- Advertisement -

 ಪ್ರತಿಭಟನೆ ವೇಳೆ ಇಂತಹಾ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಕೂಡ ಜಿಲ್ಲಾಡಳಿತ ಸತೀಶ್‌ ವಿರುದ್ದ ಇನ್ನೂ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ.

- Advertisement -