ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಗೆ Koo (ಕೂ) ನಲ್ಲಿ 1 ಮಿಲಿಯನ್ ಫಾಲೋವರ್ಸ್

Prasthutha|

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮತ್ತು ‘ಬಾಲಿವುಡ್ ಕ್ವೀನ್’ – ಕಂಗನಾ ರಣಾವತ್ – ಭಾರತದ ಮೈಕ್ರೋಬ್ಲಾಗಿಂಗ್ ವೇದಿಕೆಯಾದ Koo (ಕೂ) ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಫೆಬ್ರವರಿ 2021 ರಲ್ಲಿ ಕೂನಲ್ಲಿ ತಮ್ಮ ಖಾತೆಯನ್ನು ತೆರೆದ ನಂತರ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಈ ಮೈಲಿಗಲ್ಲು ಸ್ಥಾಪಿಸಿದ ಕಂಗನಾ ಅವರನ್ನು ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ ಮತ್ತು ನಟಿಯ ಅದ್ಭುತ ಅಭಿನಯ, ಕಮರ್ಷಿಯಲ್ ಸಕ್ಸಸ್ ಬಗ್ಗೆ Koo (ಕೂ) ಮಾಡಿದ್ದಾರೆ. ಕಂಗನಾ ಅವರ ಅಧಿಕೃತ ಕೂ ಖಾತೆ – @kanganarofficial – ಅತಿಯಾಗಿ ಆಕರ್ಷಿಸಿತು ಮತ್ತು ಕಂಗನಾರ ಫಾಲೋವರ್ಸ್ ಕಳೆದ ಮೂರು ತಿಂಗಳಲ್ಲಿ ಬಹುತೇಕ ದ್ವಿಗುಣಗೊಂಡಿದ್ದಾರೆ, ವೇದಿಕೆಯಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಕಂಗನಾ ಪಾತ್ರರಾಗಿದ್ದಾರೆ.

- Advertisement -

ಕಂಗನಾ ತಮ್ಮ ಮುಂಬರುವ ತ್ರಿಭಾಷಾ ಚಿತ್ರದ ಬಗ್ಗೆ ಉತ್ಸಾಹದಿಂದ ಪೋಸ್ಟ್ ಮಾಡುತ್ತಿದ್ದಾರೆ, ತಲೈವಿ – ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಚರಿತ್ರೆ – ಈ ಚಿತ್ರದಲ್ಲಿ ಅವರು ಅರವಿಂದ ಸ್ವಾಮಿ ಎದುರು ನಟಿಸಿದ್ದಾರೆ. ಚಿತ್ರದ ಬಗೆಗಿನ ಸಂದರ್ಶನವೊಂದರಲ್ಲಿ ತಮಗೆ ಆ ಪಾತ್ರದ ಬಗ್ಗೆ ಹೆದರಿಕೆಯಿತ್ತೆಂದು ಹೇಳಿ, ತಮ್ಮ ಮತ್ತು ದಿವಂಗತ ನಾಯಕಿಯ ನಡುವೆ ಅನೇಕ ಸಮಾನಾಂತರ ಅಂಶಗಳನ್ನು ಎಳೆದಿದ್ದಾರೆ. ಇತ್ತೀಚಿನ Koo (ಕೂ) ಪೋಸ್ಟ್ ನಲ್ಲಿ, ಕಂಗನಾ ಅಧಿಕೃತ ಪೋಸ್ಟರ್ ನೊಂದಿಗೆ ತಲೈವಿಯ ಮೊದಲ ಹಾಡು, ತೇರಿ ಆಂಖೋ ಮೇ ಪ್ರಕಟಿಸಿದ್ದಾರೆ.

Koo (ಕೂ) ವಕ್ತಾರರು ” ನಮ್ಮ ವೇದಿಕೆಯಲ್ಲಿ ಕಂಗನಾ ಒಂದು ಮಿಲಿಯನ್ ಫಾಲೋವರ್ಸ್ ತಲುಪಿದ್ದಕ್ಕೆ ನಾವು ಹರ್ಷಗೊಂಡಿದ್ದೇವೆ. ವೇದಿಕೆಯ ಆರಂಭಿಕ ಬೆಂಬಲಿಗರಾಗಿ ಭಾಷಾ ಅಡೆತಡೆಗಳನ್ನು ನಿವಾರಿಸಿ ನಿಜವಾದ ಸಂಪರ್ಕಗಳನ್ನ ಏರ್ಪಡಿಸುವ ಸಂದೇಶವನ್ನು ಪಸರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಅಭಿವ್ಯಕ್ತಿಯ ಬೆಳಕಾಗಿದ್ದವರು ಮತ್ತು ಹಿಂಜರಿಕೆಯಿಲ್ಲದೆ ವೇದಿಕೆಯಲ್ಲಿ ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು. ನಾವು ಅವರ ಬೆಂಬಲವನ್ನು ಪ್ರಶಂಸಿಸುತ್ತೇವೆ ಮತ್ತು ಇನ್ನೂ ಹಲವು ಮೈಲಿಗಲ್ಲುಗಳನ್ನ ಸ್ಥಾಪಿಸಲಿ ಎಂದು ಬಯಸುತ್ತೇವೆ. ನಮ್ಮ ಬಹುಭಾಷಾ ವೈಶಿಷ್ಟ್ಯಗಳು ದೇಶಾದ್ಯಂತ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತವೆ ಎಂದು ನಾವು ನಂಬುತ್ತೇವೆ” ಎಂದು ಹೇಳಿದರು.

ಕಂಗನಾ ರಣಾವತ್ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಬಾಲಿವುಡ್ ಕ್ವೀನ್’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಾರೆ ಮತ್ತು ಮಣಿಕರ್ಣಿಕಾ – ದಿ ಕ್ವೀನ್ ಆಫ್ ಝಾನ್ಸಿ ನಿರ್ದೇಶಿಸಿದ್ದಾರೆ ಜೊತೆಗೆ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ.

- Advertisement -