ಹಾಸನ: SDPI ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲದೆ 365 ದಿನಗಳಲ್ಲೂ ಕೂಡ ಜನರ ಸಮಸ್ಯೆಯನ್ನು ಬಗೆಹರಿಸಲು ಹೋರಾಟ ರಾಜಕೀಯ ಮಾಡುವ ಪಕ್ಷವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.
ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೆತ್ರಗಳ ಚುನಾವಣೆಯಲ್ಲಿ ಎಸ್‌ಡಿಪಿಐ ಪಕ್ಷದ ನಿಲುವು ಕುರಿತು ಜಿಲ್ಲಾ ಕಚೇರಿಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದ ಪಕ್ಷದ ನಾಯಕರುಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
“SDPI ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿ ಹೋಗಿ ಮತ ಕೇಳುವ ಪಕ್ಷವಲ್ಲ, ವರ್ಷದ 365 ದಿನಗಳಲ್ಲಿ ಸಹ ನಮ್ಮ ಕಾರ್ಯಕರ್ತರು ಜನರ ಸಮಸ್ಯೆಯನ್ನು ಬಗೆಹರಿಸಲು ಹೋರಾಟ ರಾಜಕೀಯ ಮಾಡುತ್ತಿದ್ದಾರೆ ಹಾಗಾಗಿ ಎಸ್ಡಿಪಿಐ ಸ್ಪರ್ದಿಸಿರುವ 16 ಕ್ಷೆತ್ರಗಳಲ್ಲಿ ಗೆಲುವು ನಿಶ್ಚಿತ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಎಸ್ಡಿಪಿಐ ಅಭ್ಯರ್ಥಿ ಕಣಕ್ಕೆ ಇಳಿಸದ ಕಾರಣ ಫ್ಯಾಸಿಸ್ಟ್ ಮನೋಭಾವ ಇರುವ ಅಭ್ಯರ್ಥಿಗಳನ್ನು ಸೋಲಿಸುವ ಮತ್ತು ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಈ ಬಗ್ಗೆ ಕ್ಷೆತ್ರವಾರು ಅಭ್ಯರ್ಥಿಗಳ ಬಗ್ಗೆ( ಹಾಸನ, ಆಲೂರು -ಸಕಲೇಶಪುರ, ಬೇಲೂರು, ಅರಸೀಕೆರೆ )ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯ ನೀಡಿದರು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ, ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ 16 ಕ್ಷೆತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ಉಳಿದ ಕ್ಷೆತ್ರಗಳಲ್ಲಿ ಬಿಜೆಪಿ ಹೊರತು ಪಡಿಸಿ ಜಾತ್ಯತೀತ ಮನೋಭಾವವುಳ್ಳ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದೇವೆ ಇದರ ಸಲುವಾಗಿ ಕ್ಷೆತ್ರ ವಾರು ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದೂ ರಾಜ್ಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತಿಳಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾಧ್ಯಕ್ಷರಾದ ಸಿದ್ದೀಕ್ ಆನೆಮಹಲ್, ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್, ಉಪಾಧ್ಯರಾದ ಸೈಯದ್ ಇರ್ಫಾನ್, ಹಾಸನ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಇಮ್ರಾನ್ ಅರೇಹಳ್ಳಿ, ಜಿಲ್ಲಾ ಸಮಿತಿ ಸದಸ್ಯರಾದ ಫೈರೋಜ್ ಪಾಶ, ಹಾಸನ ವಿಧಾನಸಭಾ ಕ್ಷೆತ್ರದ ಅಧ್ಯಕ್ಷರಾದ ಶಜೀಲ್ ಅಹಮದ್, ಅರಸೀಕೆರೆ ವಿಧಾನಸಭಾ ಕ್ಷೆತ್ರದ ಅಧ್ಯಕ್ಷರಾದ ಆಜ್ಗರ್ ಅಲಿ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆಯ ಕಾರ್ಯಕರ್ತರು ಉಪಸ್ಥಿತರಿದ್ದರು.