ಮಂಗಳೂರು : ಕಾಡು ಪ್ರಾಣಿಗಳ ಹತ್ಯೆಗೆ ಸಂಚು ರೂಪಿಸಿ ಕಚ್ಚಾ ಬಾಂಬ್ಗೆ ಕೋಳಿ ಮಾಂಸ ಇರಿಸಿದ್ದ ಪ್ರಕರಣವೊಂದು ಮೂಡುಬಿದಿರೆ ತಾಲೂಕಿನ ಬಡಗಮಿಜಾರು ಎಂಬಲ್ಲಿ ನಡೆದಿದೆ.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಎರಡು ಸ್ಪೋಟಕ ಪತ್ತೆಯಾಗಿದ್ದು, ನ್ಯಾಯಾಲಯದ ಆದೇಶ ಅನುಸಾರ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ನಾಶಗೊಳಿಸಲಾಗಿದೆ.
ಕೋಳಿ ಕರುಳು ಸುತ್ತಿ ಸ್ಪೋಟಕ ಇರಿಸಿ ಪ್ರಾಣಿ ವದೆಗೆ ಯತ್ನಿಸಲಾಗಿದ್ದು, ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ಬಳಕೆ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಕೃತ್ಯ ಮಾಡಿದವರ ಬಗ್ಗೆ ಇನ್ನೂ ಮಾಹಿತಿ ಎನ್ನಲಾಗಿದೆ.
ಸ್ಪೋಟಕದಿಂದ ಸ್ಥಳೀಯರಲ್ಲಿ ಗೊಂದಲದ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ತಿಳಿಸಿದ್ದಾರೆ.
ವಿಡೀಯೋ ವೀಕ್ಷಿಸಿ …