ಅಮೆರಿಕ ಸರಕಾರದ ಮತ್ತೊಂದು ಪ್ರತಿಷ್ಠಿತ ಹುದ್ದೆಗೆ ಭಾರತೀಯ ಮೂಲದ ಪ್ರಮೀಳಾ ಜಯಪಾಲ್ ಆಯ್ಕೆ

Prasthutha|

ವಾಷಿಂಗ್ಟನ್ : ಅಮೆರಿಕದ ಭಾವೀ ಅಧ್ಯಕ್ಷ ಜೋ ಬೈಡನ್ ಸರಕಾರದಲ್ಲಿ ಭಾರತೀಯರ ಪ್ರಭಾವ ಇನ್ನಷ್ಟು ಹೆಚ್ಚುತ್ತಿದೆ. ಹಲವು ಪ್ರಮುಖ ಹುದ್ದೆಗಳಿಗೆ ಭಾರತೀಯರ ನೇಮಕದ ಬಳಿಕ, ಇದೀಗ ಅಮೆರಿಕ ಸಂಸತ್ತಿನ ಪ್ರಭಾವಿ ಸ್ಥಾನವಾದ ಕಾಂಗ್ರೆಸ್ಸಿಯನಲ್ ಪ್ರೋಗ್ರೆಸಿವ್ ಕಾಕಸ್ (ಸಿಪಿಸಿ) ಸಮಿತಿಗೆ ಅಧ್ಯಕ್ಷೆಯಾಗಿ ಭಾರತೀಯ ಮೂಲದ ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಆಯ್ಕೆಯಾಗಿದ್ದಾರೆ.

- Advertisement -

ಸಮಿತಿಯು ಜನಾಂಗೀಯ ನ್ಯಾಯದ ವಿಷಯದಲ್ಲಿ ಸುಧಾರಣೆಗೊಳ್ಳಲಿದೆ, ಬಡತನ ಮತ್ತು ಅಸಮಾನತೆಯಿಂದ ದೇಶವನ್ನು ಪರಿವರ್ತಿಸುವಲ್ಲಿ ಸಹಾಯ ಮಾಡಲಿದೆ ಎಂದು ಪ್ರಮೀಳಾ ಹೇಳಿದ್ದಾರೆ.

ಜೀವನದುದ್ದಕ್ಕೂ ಸಂಘಟಕಿಯಾಗಿರುವುದಕ್ಕೆ ತನಗೆ ಈ ಗೌರವ ಸಿಕ್ಕಿದೆ ಎಂದು ಪ್ರಮೀಳಾ ಹೇಳಿದ್ದಾರೆ.

- Advertisement -

ಪ್ರಮೀಳಾ ಜಯಪಾಲ್ ಭಾರತದ ಆಗಿನ ಮದ್ರಾಸ್, ಈಗಿನ ಚೆನ್ನೈನಲ್ಲಿ ಜನಿಸಿದವರು. ತಾಯಿ ಲೇಖಕಿ ಮಾಯಾ ಜಯಪಾಲ್, ತಂದೆ ಎಂ.ಪಿ. ಜಯಪಾಲ್. ಪ್ರಮೀಳಾ ತಮ್ಮ ಬಾಲ್ಯವನ್ನು ಇಂಡೋನೇಷ್ಯಾ ಮತ್ತು ಸಿಂಗಾಪುರ್ ನಲ್ಲಿ ಕಳೆದಿದ್ದರು. 1982ರಲ್ಲಿ ಅವರು ತಮ್ಮ 16ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ಕಾಲೇಜು ಶಿಕ್ಷಣಕ್ಕೆ ತೆರಳಿದ್ದರು. ಅಲ್ಲಿ ಅವರು ಪದವಿ ಮತ್ತು ಎಂಬಿಎ ಪದವಿ ಪಡೆದಿದ್ದಾರೆ.

Join Whatsapp