ದೋಷ ಹೇಳಿದರೆ ನಿಂದಿಸುವ ನಾಯಕರು | ಬೇಸತ್ತು ಪಕ್ಷ ತ್ಯಜಿಸಿದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ !

Prasthutha|

ಮೇಘಾಲಯ: ಮೇಘಾಲಯದ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಕಾಂಗ್ರೆಸ್ ನಲ್ಲಿ ದೋಷವಿದೆ ಎಂದು ಹೇಳಿದರೆ ನಾಯಕರು ನಿಂದಿಸುತ್ತಾರೆ ಎಂದು ಆರೋಪಿಸಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಿಚರ್ಡ್ ಎಂ ಮರಕ್ ಕೂಡ ರಾಜೀನಾಮೆ ನೀಡಿದ್ದಾರೆ.

- Advertisement -


ಮರಕ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಯವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರಿಗೆ ರವಾನಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ನ ಕಾರ್ಯವೈಖರಿಯಿಂದ ಹಲವು ದಿನಗಳಿಂದಲೂ ನಾನು ಅಸಮಾಧಾನ ಹೊಂದಿದ್ದಾಗಿ ಮರಕ್ ತಿಳಿಸಿದ್ದಾರೆ. ಸಂಬಂಧಪಟ್ಟವರಿಗೆ ಪಕ್ಷದಲ್ಲಾಗುತ್ತಿರುವ ಸಮಸ್ಯೆಗಳ ಹಲವು ಬಾರಿ ಹೇಳಿದ್ದೇನೆ. ಆದರೆ ಅದನ್ನು ಸರಿಪಡಿಸುವ ಪ್ರಯತ್ನಗಳು ಇದುವರೆಗೂ ಆಗಲಿಲ್ಲ. ಇದೆಲ್ಲದರ ಬದಲು ದೋಷ ಹೇಳಿದವರನ್ನೇ ನಿಂದಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮೇಘಾಲಯದಾದ್ಯಂತ ಸುಮಾರು 500 ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ತ್ಯಜಿಸಿದ್ದಾರೆ ಎಂದು ಹೇಳಿದ್ದಾರೆ.


ಇತ್ತೀಚೆಗಷ್ಟೆ ಮೇಘಾಲಯದಲ್ಲಿ ಕಾಂಗ್ರೆಸ್ ನ ಮುಕುಲ್ ಸಂಗ್ಮಾ ಸೇರಿ 11 ಶಾಸಕರು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿ ಪಕ್ಷಕ್ಕೆ ಬಹುದೊಡ್ಡ ಆಘಾತ ನೀಡಿದ್ದರು.ಇದೀಗ ಕಾಂಗ್ರೆಸ್ ಗೆ ಮತ್ತೊಂದು ಎದುರಾಗಿದೆ.

Join Whatsapp