ಹೆಣದಲ್ಲೂ ಹಣ ಮಾಡುವ ಭ್ರಷ್ಟ ಬಿಜೆಪಿಯ ಬಣ್ಣ ಬಯಲಾಗುತ್ತಿದೆ : ಕಾಂಗ್ರೆಸ್

Prasthutha|

ಬೆಂಗಳೂರು : ಬೆಡ್ ಬ್ಲಾಕ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಹೆಣದಲ್ಲೂ ಹಣ ಮಾಡುವ ಭ್ರಷ್ಟ ಬಿಜೆಪಿಯ ಬಣ್ಣ ಬಯಲಾಗುತ್ತಿದೆ. ಬೆಡ್ ಬ್ಲಾಕಿಂಗ್ ಹಗರಣದ ಅರೋಪಿ ಬಿಜೆಪಿಯ ಹಲವು ನಾಯಕರಿಗೆ ಅತ್ಯಾಪ್ತೆಯಾಗಿದ್ದರು ಎಂದು ರಾಜ್ಯ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

- Advertisement -

ಹೆಣದಲ್ಲೂ ಹಣ ಮಾಡುವ ಭ್ರಷ್ಟ ಬಿಜೆಪಿಯ ಬಣ್ಣ ಬಯಲಾಗುತ್ತಿದೆ. ಕಳೆದ ವರ್ಷ ಗೋಲ್ಮಾಲ್ ಕೋವಿಡ್ ಸೆಂಟರ್ ಹೆಸರಲ್ಲಿ ಖಜಾನೆ ಲೂಟಿ ಹೊಡೆದಿದ್ದರು. ಈಗ ಬೆಡ್ ಹೆಸರಲ್ಲಿ ನೇರವಾಗಿ ಜನರ ದರೊಡೆಗೆ ನಿಂತಿದ್ದಾರೆ. ಬೆಡ್ ಬ್ಲಾಕಿಂಗ್ ಹಗರಣದ ಆರೋಪಿ ಬಿಜೆಪಿಯ ಹಲವು ನಾಯಕರಿಗೆ ಅತ್ಯಾಪ್ತೆಯಾಗಿರುವ ಕಾರಣ ರಾಜಾರೋಷವಾಗಿ ದಂಧೆ ನಡೆಯುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದೆ.

Join Whatsapp