ತೇಜಸ್ವಿ ಸೂರ್ಯರನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸುವುದೇ ಉತ್ತಮ: ಬ್ರಿಜೇಶ್ ಕಾಳಪ್ಪ

Prasthutha|

►’ಧರ್ಮದ ಆಧಾರದಲ್ಲಿ ಸಮಾಜವನ್ನು ವಿಂಗಡಿಸುವ ಸಂಸದನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’

- Advertisement -

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯರನ್ನು ಮಾನಸಿಕ ಆಸ್ಪತ್ರೆಯಾದ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸುವುದು ಉತ್ತಮ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿಕೆ ನೀಡಿದ್ದು ಪರೋಕ್ಷವಾಗಿ ತೇಜಸ್ವಿ ಸೂರ್ಯ ಮಾನಸಿಕ ಅಸ್ಪಸ್ಥರು ಎಂದು ಹೇಳಿದ್ದಾರೆ.

ಅವರು ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ಬೆಡ್ ಹಗರಣದ ಬಗ್ಗೆ ನೀಡಿದ್ದ ಹೇಳಿಕೆ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಸೂರ್ಯ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

- Advertisement -

ತೇಜಸ್ವಿ ಸೂರ್ಯ ವಕೀಲರೆಂದು ಹೇಳಿತ್ತಾರೆ ಆದರೆ ಇದುವರೆಗೆ ಅವರು ಕೋರ್ಟಿಗೆ ಬಂದಿರುವುದನ್ನು ನಾವು ನೋಡಿಲ್ಲ. ಕೇವಲ ಒಂದೇ ಧರ್ಮದ ಹೆಸರನ್ನು ಮಾತ್ರ ಪ್ರಕಟಿಸಿರುವ ಸೂರ್ಯ ಮನಸ್ಥಿತಿಯು ಅತ್ಯಂತ ನೀಚ ಮನಸ್ಥಿತಿಯಾಗಿದೆ. ಅದರಲ್ಲಿ ಸಮಾಜವನ್ನು ಒಡೆಯುವ ಉದ್ದೇಶವಿದೆ ಎಂದು ಹೇಳಿದ್ದಾರೆ.

ಕೇವಲ 17 ಮಂದಿಯ ಹೆಸರನ್ನು ಮಾತ್ರ ಉಲ್ಲೇಖಿಸಿ ಅವರನ್ನು ಆರೋಪಿತರನ್ನಾಗಿಸುವುದು ಮತ್ತು ಉಳಿದವರನ್ನು ಒಳ್ಳೆಯವರೆಂದು ಬಿಂಬಿಸುವ ಪ್ರಯತ್ನ ಇದಾಗಿದೆ ಎಂದು ಬಿಜೇಶ್ ಹೇಳಿದ್ದಾರೆ.

ಒಬ್ಬ ಸಂಸದನೇ ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸುವುದು ಸಂವಿಧಾನ ವಿರೋಧಿಯಾಗಿದ್ದಾರೆ. ಬಿಜೆಪಿ ಹಗರಣವೇ ನಡೆಸಿದೆ ಆದರೆ ಅದರ ಬಗ್ಗೆ ಮಾತನಾಡುವವರೇ ಇಲ್ಲ. ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವಾಗ ಅದನ್ನು ತೋರಿಸದೆ ಸಾವಿರಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ‌.

ತೇಜಸ್ವಿ ಸೂರ್ಯ ಬ್ಲಾಕ್ ಮೈಲ್ ಮಾಡುವ ಒಂದು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಅದರಿಂದ ತಮಗೆ ಬೇಕಾದವರಿಗೆ ಬೆಡ್ ವ್ಯವಸ್ಥೆ ಮಾಡಿ ಕೊಡಲಾಗುತ್ತಿದೆ. ಸರಕಾರದ ಮೇಲೆ ದಬ್ಬಾಳಿಕೆ ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ತಕ್ಷಣ ತೇಜಸ್ವಿ ಸೂರ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

Join Whatsapp