ಬಿಜೆಪಿಗರ ಬಾಯಲ್ಲಿ “ಗೋಮಾತಾ” ಒಳಗೆ “ಗೋ ಖಾತಾ”: ಕಾಂಗ್ರೆಸ್ ವಾಗ್ದಾಳಿ

Prasthutha|

ಬೆಂಗಳೂರು: ನಾನು ಗೋಮಾಂಸ ತಿನ್ನುತ್ತೇನೆ. ಆದರೂ ಬಿಜೆಪಿಯಲ್ಲಿದ್ದೇನೆ. ಇದರಿಂದ ಯಾವುದೇ ಸಮಸ್ಯೆಯೂ ಕಾಣಿಸುತ್ತಿಲ್ಲ ಎಂಬ ಮೇಘಾಲಯದ ಬಿಜೆಪಿ ಅಧ್ಯಕ್ಷ ಅರ್ನೆಸ್ಟ್ ಮಾದ್ರಿ ಹೇಳಿಕೆಯ ವಿಚಾರದಲ್ಲಿ ಬಿಜೆಪಿಯ ಕಾಲೆಳೆದ ಕಾಂಗ್ರೆಸ್, ಬಿಜೆಪಿಗರ ಬಾಯಲ್ಲಿ ಮಾತ್ರ “ಗೋಮಾತಾ” ಒಳಗೆ “ಗೋ ಖಾತಾ” ಎಂದು ವಾಗ್ದಾಳಿ ನಡೆಸಿದೆ.

- Advertisement -

ಬಿಜೆಪಿಗರು ಗೋಪ್ರೇಮಿಗಳಲ್ಲ, ಗೋಮಾಂಸ ಪ್ರೇಮಿಗಳು ಎನ್ನುವುದು ಹಳೆಯ ಸತ್ಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಮೇಘಾಲಯದ ಬಿಜೆಪಿ ರಾಜ್ಯಾಧ್ಯಕ್ಷ ಗೋಮಾಂಸ ಸೇವಿಸುತ್ತಾರಂತೆ, ಬಿಜೆಪಿ ಎಂದಿಗೂ ವಿರೋಧಿಸಿಲ್ಲವಂತೆ. ಬಿಜೆಪಿಗರ ಬಾಯಲ್ಲಿ ಮಾತ್ರ “ಗೋಮಾತಾ” ಒಳಗೆ “ಗೋ ಖಾತಾ”! ಗೋವಾಕ್ಕೆ ಗೋಮಾಂಸ ರಫ್ತು ಮಾಡುವ ಬಿಜೆಪಿ ಸರ್ಕಾರಕ್ಕೆ ದಮ್ಮು ತಾಕತ್ತು ಇದ್ದರೆ ಈ ಬಗ್ಗೆ ಮಾತಾಡಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

Join Whatsapp