ಕೇಂದ್ರದ ಬಜೆಟ್, ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ: ಕಾಂಗ್ರೆಸ್

Prasthutha|

- Advertisement -

ಬೆಂಗಳೂರು: ಕೇಂದ್ರದ ಬಜೆಟ್ ಮಂಡನೆ ಎನ್ನುವುದು ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ! ಕೇವಲ ಒಂದೂವರೆ ಗಂಟೆಯಲ್ಲೇ ಮುಗಿದುಹೋದ ಬಜೆಟ್ ಭಾಷಣವೇ ಇದಕ್ಕೆ ಸಾಕ್ಷಿ.

 ಜನರ ಸುಲಿಗೆ ಮಾಡಿ ಜಿಎಸ್ಟಿ ತೆರಿಗೆ ಸಂಗ್ರಹಿಸಿದ್ದನ್ನೇ ಹೆಗ್ಗಳಿಕೆ ಎಂಬಂತೆ ಹೇಳಿಕೊಳ್ಳಲು ಮಾತ್ರ ಈ ಬಜೆಟ್ ಭಾಷಣ ಸೀಮಿತವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರೈತರ ಆತ್ಮಹತ್ಯೆಗಳು ಗಣನೀಯವಾಗಿ ಹೆಚ್ಚುತ್ತಿದೆ, ನೆರೆ, ಬರಗಳಂತಹ ಪ್ರಕೃತಿ ವಿಕೋಪಗಳಿಂದ ನಷ್ಟ ಅನುಭವಿಸಿದ ರೈತರಿಗೆ ಸ್ಥೈರ್ಯ ತುಂಬುವಂತಹ ಯೋಜನೆಗಳು ಅಗತ್ಯವಿದ್ದವು. ರೈತರ ಬಗೆಗೆ ಕಿಂಚಿತ್ತೂ ಯೋಚಿಸದೆ, ಬಜೆಟ್ನಲ್ಲಿ ನಿರ್ಲಕ್ಷಿಸುವ ಮೂಲಕ ರೈತರ ಪ್ರತಿಭಟನೆಗೆ ಪ್ರತಿಕಾರ ತೀರಿಸಿಕೊಂಡಿದೆಯೇ ಮೋದಿ ಸರ್ಕಾರ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಲಾಕ್ಡೌನ್ನಿಂದ ಆಗಿರುವ ಆರ್ಥಿಕ ಹಿನ್ನೆಡೆಯನ್ನು ಸರಿದೂಗಿಸಲು ಯಾವುದೇ ಯೋಜನೆಗಳು ಈ ಬಜೆಟ್ನಲ್ಲಿಲ್ಲ. ಆರ್ಥಿಕ ಚಟುವಟಿಕೆಗಳ ವೃದ್ಧಿಗೆ, ಬಡ, ಮದ್ಯಮವರ್ಗದ ಜನರ ತೆರಿಗೆಯ ಹೊರೆ ಇಳಿಸುವ ನಿರೀಕ್ಷೆಯನ್ನ ಸರ್ಕಾರ ಹುಸಿ ಮಾಡಿದೆ, ಯುವ ಜನತೆ ಭವಿಷ್ಯದ ಕನಸು ಕಾಣುವ ಯಾವುದೇ ಸಕಾರಾತ್ಮಕ ಅಂಶಗಳು ಈ ಬಜೆಟ್ ನಲ್ಲಿ ಇಲ್ಲ ಎಂದು ಟೀಕಿಸಿದೆ.



Join Whatsapp