ಸಮಾನ ಮನಸ್ಕರೊಂದಿಗೆ ಮೈತ್ರಿಗೆ ಸಿದ್ಧ ಎಂದ ಕಾಂಗ್ರೆಸ್

Prasthutha|

ರಾಯಿಪುರ: ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ಕನಸನ್ನು ಕೈಬಿಟ್ಟಿರುವ ಕಾಂಗ್ರೆಸ್ ಇದೀಗ ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಮೈತ್ರಿಯ ಬಗ್ಗೆ ಮಾತನಾಡಲು ಆರಂಭಿಸಿದೆ.
ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧ ಎಂದು ಮಹಾಧಿವೇಶನ ಹೇಳಿದೆ.
ಬಿಜೆಪಿ ನೇತೃತ್ವದ ಎನ್’ಡಿಎ ಎದುರಿಸಲು ಸಮಾನ ಸೈದ್ಧಾಂತಿಕ ನೆಲೆಯಲ್ಲಿ ವಿಪಕ್ಷಗಳು ಒಂದಾಗುವ ತುರ್ತು ಈಗ ಇದೆ ಎಂದು ಛತ್ತೀಸ್’ಗಢದ ರಾಯ್’ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್’ನ 85ನೇ ಮಹಾ ಅಧಿವೇಶನದಲ್ಲಿ ಪ್ರತಿಪಾದಿಸಿವೆ.
ಆದರೆ ತೃತೀಯ ರಂಗದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ತೃತೀಯ ರಂಗದಿಂದ ಬಿಜೆಪಿಗೆ ಅನುಕೂಲವಾಗಲಿದೆ. ಇದು ಬಿಜೆಪಿ ವಿರೋಧಿ ಪಡೆ ನಿರ್ಮಾಣಕ್ಕೆ ತಡೆಯಾಗಲಿದೆ ಎಂದು ಎಚ್ಚರಿಸಿದೆ.
ಯಶಸ್ವೀ ಸಾಮಾನ್ಯ ಕನಿಷ್ಠ ಕಾರ್ಯಕ್ರಮದೊಂದಿಗೆ ಸಮಾನಮನಸ್ಕ ಕೂಟವನ್ನು ಇಂದು ಬಲಪಡಿಸುವ ಅಗತ್ಯವಿದೆ. ಎಲ್ಲ ಪಕ್ಷಗಳ ಜೊತೆಗೂಡಿ ಬಿಜೆಪಿ-ಆರ್ಎಸ್ಎಸ್ ವಿರುದ್ಧ ಹೋರಾಡಲು ನಾವು ಸಿದ್ಧರಿದ್ದೇವೆ” ಎಂದು ಅವರು ಹೇಳಿದ್ದಾರೆ.

Join Whatsapp