ನಮೀಬಿಯಾದಿಂದ ಚಿರತೆಗಳನ್ನು ಭಾರತಕ್ಕೆ ತರುವುದು ಕಾಂಗ್ರೆಸ್ ನ ಯೋಜನೆ, ಮೋದಿ ಹೈಜಾಕ್ ಮಾಡಿದ್ದಾರೆ: ಕಾಂಗ್ರೆಸ್

Prasthutha|

ನವದೆಹಲಿ: ನಮೀಬಿಯಾದಿಂದ ಚಿರತೆಗಳನ್ನು ಭಾರತಕ್ಕೆ ತರುವುದು ಕಾಂಗ್ರೆಸ್ ರೂಪಿಸಿದ್ದ ಯೋಜನೆಯಾಗಿದ್ದು, ಇದನ್ನು ಪ್ರಧಾನಿ ಮೋದಿ ಈಗ ಹೈಜಾಕ್ ಮಾಡಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

- Advertisement -

ನಮೀಬಿಯಾದಿಂದ ಎಂಟು ಚಿರತೆಗಳನ್ನು ಭಾರತಕ್ಕೆ ಕರೆತಂದಿರುವುದು ಮೋದಿಯವರ ಪ್ರಹಸನ ಎಂದು ಕಾಂಗ್ರೆಸ್ ಬಣ್ಣಿಸಿದೆ. ಹಣದುಬ್ಬರ, ನಿರುದ್ಯೋಗದಂತಹ ದೇಶದ ದೊಡ್ಡ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಾಜೆಕ್ಟ್ ಚೀತಾವನ್ನು ಈ ರೀತಿ ಹೈಲೈಟ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ದೂರಿದೆ. ಈ ಯೋಜನೆ ಮೋದಿಯವರದ್ದಲ್ಲ, ಚೀತಾ ಯೋಜನೆಗಾಗಿ 25.04.2010ರಂದು ಕೇಪ್ ಟೌನ್‌ಗೆ ನಾನು ಭೇಟಿ ನೀಡಿದ್ದೆವು. ಈ ಯೋಜನೆ ಸಂಪೂರ್ಣ ಕಾಂಗ್ರೆಸಿನದ್ದು ಎಂದು ಕಾಂಗ್ರೆಸ್ ಹಿರಿಯ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಹೇಳಿದ್ದಾರೆ.

2008-09ರಲ್ಲಿ ಕಾಂಗ್ರೆಸ್‌ನಿಂದ ‘ಪ್ರಾಜೆಕ್ಟ್ ಚೀತಾ’ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿತ್ತು. ಮನಮೋಹನ್ ಸಿಂಗ್ ಸರ್ಕಾರ ಅದನ್ನು ಅನುಮೋದಿಸಿತು. 2010ರ ಏಪ್ರಿಲ್ ನಲ್ಲಿ ಅಂದಿನ ಅರಣ್ಯ ಮತ್ತು ಪರಿಸರ ಸಚಿವ ಜೈರಾಮ್ ರಮೇಶ್ ಅವರು ಆಫ್ರಿಕಾದ ಚಿರತೆ ಔಟ್ ರೀಚ್ ಸೆಂಟರ್ ಗೆ ತೆರಳಿದ್ದರು. 2013ರಲ್ಲಿ ಸುಪ್ರೀಂಕೋರ್ಟ್ ಯೋಜನೆಯನ್ನು ನಿಷೇಧಿಸಿತು, 2020ರಲ್ಲಿ ನಿಷೇಧವನ್ನು ತೆಗೆದುಹಾಕಲಾಗಿದೆ. ಆದ್ದರಿಂದ ಈಗ ಚಿರತೆಗಳು ಬಂದಿವೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

- Advertisement -

Join Whatsapp