ಗ್ರಾಮಕ್ಕೆ ನೀರಿನ ಸೌಲಭ್ಯ ಕೇಳಿದ ಯುವಕನಿಗೆ ಕಾಂಗ್ರೆಸ್ ಶಾಸಕನಿಂದ ಕಪಾಳಮೋಕ್ಷ !

Prasthutha|

ತುಮಕೂರು: ತಮ್ಮ ಗ್ರಾಮಕ್ಕೆ ರಸ್ತೆ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕೆಂದು ಕೇಳಿದ್ದಕ್ಕೆ ಪಾವಗಡ  ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

- Advertisement -

ಗ್ರಾಮಕ್ಕೆ ನೀರು ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಕೇಳಿದ ಯುವಕನಿಗೆ ಶಾಸಕ ವೆಂಕಟರವಣಪ್ಪ ಕಪಾಳಕ್ಕೆ ಬಾರಿಸಿರುವ ದೃಶ್ಯ ವ್ಯಾಪಕ ವೈರಲ್ ಆಗಿದೆ.

ಅಲ್ಲದೆ, ಆ ಯುವಕನ ಕಪಾಳಕ್ಕೆ ಹೊಡೆದು ಪೊಲೀಸ್ ಸ್ಟೇಷನ್ಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.  ಶಾಸಕನ ದರ್ಪದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Join Whatsapp