ಪ್ರಚೋದನಕಾರಿ ಭಾಷಣಗಾರ್ತಿ ಸಾಧ್ವಿ ರಿಥಂಬರ ಆಶ್ರಮದಲ್ಲಿ ನಾಲ್ವರು ಬಾಲಕಿಯರು ಸಾವು

Prasthutha|

ಭೋಪಾಲ್: ಪ್ರಚೋದನಕಾರಿ ಭಾಷಣಗಳ ಮೂಲಕ ಸುದ್ದಿಯಾಗುವ ಸಾಧ್ವಿ ರಿಥಂಬರ ನಡೆಸುವ ಆಶ್ರಮದಲ್ಲಿ ನಾಲ್ವರು ಬಾಲಕಿಯರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಕೋಠಿ ಗ್ರಾಮದ ಸಾಧ್ವಿ ರಿಥಂಬರದ ಪೀತಾಂಬರೇಶ್ವರ ಆಶ್ರಮದ ಬಳಿ ಇರುವ ಕಾಲುವೆಯೊಂದರಲ್ಲಿ ಆಶ್ರಮದ ನಾಲ್ವರು ಬಾಲಕಿಯರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

- Advertisement -


ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಕಾಲುವೆಯಲ್ಲಿ ಸಾಧ್ವಿ ರಿಥಂಬರ ನಡೆಸುತ್ತಿದ್ದ ಆಶ್ರಮ ಶಾಲೆಯಲ್ಲಿ ಓದುತ್ತಿದ್ದ ನಾಲ್ವರು ಬಾಲಕಿಯರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿಯರನ್ನು ವೈಶಾಲಿ, ಪ್ರತಿಜ್ಞಾ, ದಿವ್ಯಾಂಶಿ ಮತ್ತು ಅಂಜನಾ ಎಂದು ಗುರುತಿಸಲಾಗಿದೆ.


ಸಾವನ್ನಪ್ಪಿರುವ ಎಲ್ಲಾ ಬಾಲಕಿಯರು 5 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಸ್ನಾನಕ್ಕಾಗಿ ಕಾಲುವೆಗೆ ಹೋಗಿದ್ದರು ಎನ್ನಲಾಗಿದೆ. ಇದೇ ವೇಳೆ ಓರ್ವ ಬಾಲಕಿ ಕಾಲುವೆಗೆ ಬಿದ್ದಿದ್ದನ್ನು ಕಂಡ ಇತರರು ರಕ್ಷಿಸಲು ಮುಂದಾಗಿದ್ದಾರೆ, ಆದರೆ ದುರದೃಷ್ಟವಶಾತ್ ನಾಲ್ವರೂ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಬಲರಾಮ್ ಸಿಂಗ್ ಹೇಳಿದ್ದಾರೆ.

- Advertisement -


ಇತ್ತೀಚೆಗಷ್ಟೆ ಸಾಧ್ವಿ ರಿಥಂಬರ ಭಾಷಣವೊಂದರಲ್ಲಿ ಹಿಂದೂಗಳು ನಾಲ್ಕು ಮಕ್ಕಳನ್ನು ಹೆತ್ತು ಅದರಲ್ಲಿ ಎರಡು ಮಕ್ಕಳನ್ನು RSS ಗೆ ನೀಡಿ ಎಂದು ಪ್ರಚೋದಿಸಿದ್ದಳು.

Join Whatsapp