ಮೋದಿಯನ್ನು ಹೊಗಳಿದ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್

Prasthutha|

ಉಡುಪಿ: ಪ್ರಧಾನಿ ಮೋದಿಯವರನ್ನು ಕಾಂಗ್ರೆಸ್ ನಾಯಕ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಹಿರಂಗವಾಗಿ ಹೊಗಳಿದ್ದಾರೆ.ಇದು ಕರಾವಳಿ ಕಾಂಗ್ರೆಸ್ಸಿನಲ್ಲಿ ತಲ್ಲಣ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಯೂ ಶುರುವಾಗಿದೆ.

- Advertisement -


ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಗೆ ಆಗಮಿಸಿದ್ದಾರೆ. ಗುರುವಾರ ಸಂಜೆ ಪ್ರಶಸ್ತಿ ಮತ್ತು ಶ್ರೀಗಳ ಸ್ವಾಗತ ಸಮಾರಂಭದಲ್ಲಿ ಭಾಷಣ ಮಾಡಿದ ಪ್ರಮೋದ್ ಮಧ್ವರಾಜ್, ಪದ್ಮವಿಭೂಷಣ ಇವತ್ತು ಸ್ವಾಮೀಜಿಯವರನ್ನು ಹುಡುಕಿಕೊಂಡು ಬಂದಿದೆ.

ಹಿಂದೆ ಎಲ್ಲಾ ಅರ್ಜಿ ಹಾಕಿದವರಿಗೆ ಪ್ರಶಸ್ತಿ ಕೊಡುವ ಕ್ರಮ ಇತ್ತು. ಇವತ್ತು ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆ ಪ್ರಶಸ್ತಿಯೇ ಹುಡುಕಿಕೊಂಡು ಬಂದಿದೆ. ಪಕ್ಷ ಬೇರೆಯಾದರೂ ಗುಣಕ್ಕೆ ಮತ್ಸರ ಇಲ್ಲ ಎಂದು ಹೇಳಿದರು.

Join Whatsapp