ದೇಶ ವಿಭಜನೆಗೆ ಕಾಂಗ್ರೆಸ್ ಕಾರಣ: ಸಿಟಿ ರವಿ

Prasthutha|

ಚಿಕ್ಕಮಗಳೂರು: ಕಾಂಗ್ರೆಸ್ ಕೋಮುವಾದಿ ರಾಜಕಾರಣದಿಂದ ದೇಶ ವಿಭಜನೆಯಾಗಿದೆ. ಹಿಂದೂಗಳನ್ನು ದುರ್ಬಲಗೊಳಿಸುವ, ಒಡೆದಾಳುವುದು ಕಾಂಗ್ರೆಸ್ ನೀತಿ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಭಾರತ ಹಿಂದೂ ರಾಷ್ಟ್ರದ ಘೋಷಣೆಯಾದರೆ ಪಾಕಿಸ್ತಾನ, ಅಫ್ಘಾನಿಸ್ತಾನವಾಗಲಿದೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಅವರು ನಗರದಲ್ಲಿ ತಿರುಗೇಟು ನೀಡಿದ ರವಿ, ಇತಿಹಾಸ ಅರಿಯದವನು ಎಂದಿಗೂ ಇತಿಹಾಸ ಸೃಷ್ಟಿಸಲಾರ. ಒಂದು ಕಾಲದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಖಂಡ ಭಾರತದ ಭಾಗವಾಗಿತ್ತು. ಅಲ್ಲಿ ನೂರಾರು ಹಿಂದೂಗಳು ಇದ್ದರು. ಮತಾಂತರ ಮಾಡಿದ ಕಾರಣ ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಿರ್ಮಾಣಕ್ಕೆ ಹಿಂದೂಗಳನ್ನು ದುರ್ಬಲಗೊಳಿಸುವ, ಒಡೆದಾಳುವ ಕಾಂಗ್ರೆಸ್ ನೀತಿ ಕಾರಣವಾಗಿದೆ. ಹಿಂದೂಗಳು ಒಗ್ಗಟ್ಟಾಗಿದ್ದರೆ ಪಾಕಿಸ್ತಾನ ಎನ್ನುವ ವಿಷಯವೇ ಪ್ರಸ್ತಾಪವಾಗುತ್ತಿರಲಿಲ್ಲ. ಕಾಂಗ್ರೆಸ್ ಕೋಮುವಾದಿ ರಾಜಕಾರಣದಿಂದ ದೇಶ ವಿಭಜನೆಯಾಗಿದೆ’ ಎಂದು ಹೇಳಿದ್ದಾರೆ.

Join Whatsapp