ಅರ್ಜುನ ಪ್ರಶಸ್ತಿ ಪುರಸ್ಕೃತ ದಲ್ಬೀರ್‌ ಸಿಂಗ್ ಹತ್ಯೆ ರಹಸ್ಯ ಬಯಲು: ಕೊಲೆಗಾರ ಅರೆಸ್ಟ್

Prasthutha|

ಚಂಡೀಗಢ: ಪಂಜಾಬ್‌ನ ಜಲಂಧರ್‌ನಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತ, ಪೊಲೀಸ್‌ ಅಧಿಕಾರಿ ದಲ್ಬಿರ್‌ ಸಿಂಗ್‌ ಅವರ ಶವ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ಸಾಗಿದ್ದಾರೆ. ಸಿಂಗ್‌ ಅವರನ್ನು ಹತ್ಯೆಗೈದ ರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ.

- Advertisement -

ರಸ್ತೆ ಬದಿಯ ಕಾಲುವೆಯಲ್ಲಿ ದಲ್ಬಿರ್‌ ಸಿಂಗ್‌ ಅವರ ಶವ ಪತ್ತೆಯಾಗಿತ್ತು. ಪೊಲೀಸ್ ಅಧಿಕಾರಿಯೇ ಹೀಗೆ ಶವವಾಗಿ ಪತ್ತೆಯಾಗಿದ್ದು, ಪೊಲೀಸರಿಗೆ ಸವಾಲು ಒಡ್ಡುವಂತಿತ್ತು. ಆದರೆ 48 ಗಂಟೆಗಳ ಒಳಗೆ ಪೊಲೀಸರು ಕೊಲೆ ಆರೋಪಿಯನ್ನು ಸೆರೆ ಹಿಡಿದು ಕೊಲೆರಹಸ್ಯವನ್ನು ಭೇದಿಸಿದ್ದಾರೆ. ಹೊಸ ವರ್ಷದ ಹಿಂದಿನ ದಿನ ರಾತ್ರಿ ತಮ್ಮ ಹಳ್ಳಿಗೆ ತೆರಳಲೆಂದು ಸಿಂಗ್‌ ಆಟೋ ಹತ್ತಿದ್ದು, ಹಳ್ಳಿಯವರೆಗೆ ಡ್ರಾಪ್‌ ಮಾಡಲು ಚಾಲಕ ಒಪ್ಪದೇ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ರಿಕ್ಷಾ ಚಾಲಕ ವಿಜಯ್‌ ಕುಮಾರ್‌ ಪೊಲೀಸ್ ಅಧಿಕಾರಿಯ ಅವರ ಪಿಸ್ತೂಲನ್ನೇ ಕಸಿದು, ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp