ಬಿಜೆಪಿಗೆ ಸಡ್ಡು ಹೊಡೆದು ಮೋದಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ ಕೇರಳ ಕಾಂಗ್ರೆಸ್

Prasthutha|

ತಿರುವನಂತಪುರಂ: ಬಿಜೆಪಿಗೆ ಸಡ್ಡು ಹೊಡೆದು ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳದ ಕಾಂಗ್ರೆಸ್ ಘಟಕ ಪ್ರದರ್ಶನ ಮಾಡಿದೆ.

- Advertisement -

2002ರ ಗುಜರಾತ್ ಗಲಭೆ ಸಂಬಂಧ ನಿರ್ಮಾಣ ಮಾಡಿದ ಸಾಕ್ಷ್ಯಚಿತ್ರ ಇದಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಈ ನಡುವೆ ಕಾಂಗ್ರೆಸ್ ಎರಡು ಭಾಗಗಳ ಸರಣಿಯ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿದೆ.
ಕಾಂಗ್ರೆಸ್ ವಿದ್ಯಾರ್ಥಿ ವಿಭಾಗ ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಚಂಡೀಗಢದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಿದ ಬಳಿಕ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಶಾಂಗುಮುಖಂ ಬೀಚ್ ನಲ್ಲಿ ಇಂದು(ಜ.26) ಪ್ರದರ್ಶಿಸಲಾಗಿದೆ.

‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ಬಿಬಿಸಿ ಸುದ್ದಿ ಸಂಸ್ಥೆ ಬಿಡುಗಡೆಗೊಳಿಸಿತ್ತು. ಬ್ರಿಟಿಷ್ ಸರ್ಕಾರ ಈ ಗುಜರಾತ್ ಗಲಭೆಗಳ ಕುರಿತು ತನಿಖೆ ನಡೆಸಲು ಕಳುಹಿಸಿದ ತಂಡವು ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಗಲಭೆಯ ವೇಳೆ ‘ಶಿಕ್ಷೆ ರಹಿತ ವಾತಾವರಣ ನಿರ್ಮಾಣ’ಕ್ಕೆ ನೇರ ಹೊಣೆ ಎಂದು ಕಂಡುಕೊಂಡಿದೆ ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ತನಿಖೆಗೆ ಆಗಮಿಸಿದ್ದ ತಂಡವು ಬ್ರಿಟಿಷ್ ಸರ್ಕಾರಕ್ಕೆ ಕಳುಹಿಸಿದ್ದ ವರದಿಯನ್ನು ಸಾಕ್ಷ್ಯಚಿತ್ರ ಉಲ್ಲೇಖಿಸಿತ್ತು.

Join Whatsapp