ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಪರ ಶಾಂತಿಯುತ ಮೌನ ಪ್ರತಿಭಟನೆ ವಿರುದ್ಧ ಕೇಸು ದಾಖಲಿಸುವ ಮೂಲಕ ಕಾಂಗ್ರೆಸ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದಿದೆ: ದೇವನೂರು ಪುಟ್ಟನಂಜಯ್ಯ

Prasthutha|

ಬೆಂಗಳೂರು: ಪ್ರಜೆಗಳಾಗಿ ನಾವು ಯಾವುದೇ ವಿಚಾರದಲ್ಲಿ ನಮ್ಮ ಅಭಿಪ್ರಾಯ ಅಥವಾ ಭಿನ್ನಾಭಿಪ್ರಾಯ ದಾಖಲಿಸಲು ನಮಗೆ ಸಂವಿಧಾನ ಒದಗಿಸಿರುವ ಅವಕಾಶ ಪ್ರತಿಭಟನೆ. ಅದರ ಅನ್ವಯ ಬೆಂಗಳೂರಿನಲ್ಲಿ ಶಾಂತಿಯುತ ಮೌನ ಪ್ರತಿಭಟನೆ ಮಾಡಿದವರ ವಿರುದ್ಧ ಕೇಸ್ ಮಾಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣ ಕಸಿದಂತೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

- Advertisement -

ಭಾರತ ಸಂವಿಧಾನದ ಆರ್ಟಿಕಲ್ 19 (1), (2), (3) ರ ಅಡಿಯಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಪ್ರಜೆಗಳು ಪಡೆದಿದ್ದಾರೆ. ಅದರಂತೆ ನಿನ್ನೆ ಪ್ಯಾಲೇಸ್ತೀನಿಗರ ಮೇಲೆ ಇಸ್ರೇಲಿಗರು ನಡೆಸುತ್ತಿರು ಆಕ್ರಮಣ ಮತ್ತು ದೌರ್ಜನ್ಯಗಳನ್ನು ವಿರೋಧಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಶಾಂತಿಯತವಾಗಿ ಮತ್ತು ಮೌನವಾಗಿ ನಡೆದ ಈ ಪ್ರತಿಭಟನೆಯ ಅಯೋಜಕರ ಮೇಲೆ ಕೇಸ್ ದಾಖಲಿಸಲಾಗಿದೆ. ಇದು ವಾಕ್ ಸ್ವಾತಂತ್ರ್ಯದ ವಿಧಿಗಳ ಸ್ಪಷ್ಟ ಉಲ್ಲಂಘನೆ. ಜನರಿಗೆ ಪ್ರತಿಭಟಿಸುವ ಹಕ್ಕು ಇಲ್ಲವೆ? ಶಾಂತಿಯುತ, ಮೌನ ಪ್ರತಿಭಟನೆಗಳ ವಿರುದ್ಧ ಕೇಸು ದಾಖಲಿಸಿ ಕಾಂಗ್ರೆಸ್ ಸರ್ಕಾರ ಯಾವ ಸಂದೇಶ ರವಾನಿಸಲು ಹೊರಟಿದೆ ಎಂದು ದೇವನೂರು ಪುಟ್ಟನಂಜಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಲಿಸರ ಈ ಕ್ರಮ ಖಂಡನೀಯ ಎಂದಿರುವ ಪುಟ್ಟನಂಜಯ್ಯ ಅವರು, ಕಾಂಗ್ರೆಸ್ ಒಂದೆಡೆ ತನ್ನ ಕೇಂದ್ರ ಸಮಿತಿಯ ಮೂಲಕ ಪ್ಯಾಲೇಸ್ತೀನಿಯರ ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸುತ್ತಾರೆ, ಇನ್ನೊಂದೆಡೆ ಪ್ಯಾಲೆಸ್ತೀನ್ ರಾಯಭಾರಿ ಕಚೇರಿಗೆ ತೆರಳಿ ಅವರಿಗೆ ಬೆಂಬಲ ಸೂಚಿಸುತ್ತಾರೆ. ಅದೇ ಕಾಂಗ್ರೆಸ್ ತಾನು ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಪ್ಯಾಲೇಸ್ತೀನ್ ಪರ ಪ್ರತಿಭಟನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಸಿದ್ದರಾಮಯ್ಯ ಅವರ ಈ ದ್ವಂದ್ವ ನೀತಿಯನ್ನು ಖಂಡಿಸುತ್ತೇವೆ ಮತ್ತು ತಕ್ಷಣ ಈ ಕೇಸನ್ನು ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಲ್ಲಿ ಆಗ್ರಹಿಸುವುದಾಗಿ ದೇವನೂರು ಪುಟ್ಟನಂಜಯ್ಯ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp