ಸತೀಶ್ ಜಾರಕಿಹೊಳಿ ಜೊತೆ ಯಾವ ವೈಮನಸ್ಸೂ ಇಲ್ಲ: ಡಿಕೆ ಶಿವಕುಮಾರ್

Prasthutha|

ಬೆಳಗಾವಿ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ಯಾವುದೇ ವೈಮನಸ್ಸಿಲ್ಲ, ಬಿಜೆಪಿ ಹಾಗೂ ಮಾಧ್ಯಮದವರಿಗೆ ಸುದ್ದಿ ಬೇಕು ಹಾಗಾಗಿ ಮುನಿಸಿನ ಸುಳ್ಳು ವದಂತಿ ಹಬ್ಬಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

- Advertisement -

ಬೆಳಗಾವಿ ತಲುಪಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತಮ್ಮ ಮತ್ತು ಸತೀಶ್ ಒಬ್ಬರೇ ಅಂತಲ್ಲ, ಎಲ್ಲ 136 ಶಾಸಕರ ಜೊತೆ ತನಗೆ ಉತ್ತಮ ಬಾಂಧವ್ಯವಿದೆ, ಮುನಿಸಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗೋದೇ ಇಲ್ಲ ಎಂದು ಅವರು ಹೇಳಿದರು.