ನಿನ್ನೆ ಕೋವಿಡ್ ನಿಂದ ಮೃತಪಟ್ಟ ರಾಮನಗರ ನಗರಸಭೆಯ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ವಿಜಯ !

Prasthutha|

►31 ವಾರ್ಡಿನಲ್ಲೂ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಬಿಜೆಪಿ !

- Advertisement -

ರಾಮನಗರ : ರಾಮನಗರ ನಗರಸಭೆ​​ ಚುನಾವಣೆಯಲ್ಲಿ  ಸ್ಪರ್ಧಿಸಿದ್ದ ಕಾಂಗ್ರೆಸ್​ ಅಭ್ಯರ್ಥಿಯೋರ್ವರು ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಆದರೆ ವಿಪರ್ಯಾಸವೆಂದರೆ ಆ ಗೆಲುವನ್ನು ಸವಿಯಲು ಖುದ್ದು ಅಭ್ಯರ್ಥಿ ಇಲ್ಲವಾಗಿದ್ದಾರೆ. ನಿನ್ನೆಯಷ್ಟೇ ಇಂದು ಜಯಗಳಿಸಿದ್ದಾರೆಂದು ಘೋಷಿತಗೊಂಡ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು ಕೊರೋನಾಗೆ ಬಲಿಯಾಗಿದ್ದರು. ಇಂದು ಮತ ಎಣಿಕೆ ನಡೆದು ಲೀಲಾ ಗೋವಿಂದರಾಜು ಗೆಲುವು ಸಾಧಿಸಿದ್ದಾರೆ.

ಲೀಲಾ ಅವರು ಜಯಗಳಿಸಿದ ಅಂತರ ಕೂಡಾ ಭರ್ಜರಿಯಾಗಿದೆ. 917 ಮತಗಳನ್ನು ಪಡೆದಿರುವ ಅವರ ಎದುರಾಳಿಯಾಗಿರುವ ಜೆಡಿಎಸ್ ಅಭ್ಯರ್ಥಿ  ಕೇವಲ 107 ಮತಗಳನ್ನಷ್ಟೇ ಪಡೆಯಲು ಸಫಲರಾಗಿ ಠೇವಣಿ ಕಳೆದುಕೊಂಡಿದ್ದಾರೆ.

- Advertisement -

ಉಪಮುಖ್ಯಮಂತ್ರಿ ಅಶ್ವಥ್ ನಾತಾಯಣ್ ಗೆ ತೀವ್ರ ಮುಖಭಂಗ

ರಾಮನಗರ ಚುನಾವಣೆಯಲ್ಲಿ ಅಬ್ಬರದ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅಬ್ಬರದ ಪ್ರಚಾರ ಕೈಗೊಂಡಿದ್ದರು. ಇಂದಿನ ಫಲಿತಾಂಶ ಬಿಜೆಪಿಗೆ ಮಾತ್ರವಲ್ಲ  ಜಿಲ್ಲಾ ಉಸ್ತುವಾರಿಯೂ ಆಗಿರುವ ಡಿಸಿಎಂ ಅಶ್ವಥ್ ನಾರಾಯಣ್​​ಗೆ ತೀವ್ರ ಮುಖಭಂಗ ಆಗಿದೆ. ರಾಮನಗರ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಖಾತೆಯೇ ತೆರೆದಿಲ್ಲ. 31 ವಾರ್ಡ್ ಗಳ ಪೈಕಿ ಒಂದೂ ವಾರ್ಡ್ ಗೆಲ್ಲಲು ಕೂಡಾ ಬಿಜೆಪಿ ವಿಫಲಗೊಂಡಿದೆ. 31 ವಾರ್ಡ್ ಗಳಲ್ಲೂ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಪ್ರಚಾರದ ವೇಳೆ ಅವರು ಬಿಜೆಪಿ 20 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದ್ದರು.

31 ವಾರ್ಡ್ ಗಳ ಪೈಕಿ ಕಾಂಗ್ರೆಸ್19 ರಲ್ಲಿ ಜಯ ಸಾಧಿಸಿದರೆ,  ಜೆಡಿಎಸ್ 11 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ. ಪಕ್ಷೇತರರೊಬ್ಬರು ಜಯಗಳಿಸಿದ್ದಾರೆ. ಬಿಜೆಪಿ ಜೊತೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ಫಲಿತಾಂಶ ಅಚ್ಚರಿಗೆ ಕಾರಣವಾಗಿದೆ. ಒಂದು ಕಾಲದಲ್ಲಿ ಜೆಡಿಎಸ್ ನ ಭದ್ರಕೋಟೆಯಾಗಿದ್ದ ರಾಮನಗರದಲ್ಲಿ ಜೆಡಿಎಸ್ ಕಾಂಗ್ರೆಸ್ ವಿರುದ್ಧ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲಗೊಂಡಿದೆ

Join Whatsapp