ಬೆಂಗಳೂರು: ಸಂಸದ ತೇಜಸ್ವಿ ಸೂರ್ಯನ ಎದೆ ಬಗೆದರೆ ಸಿಗುವುದು ಎರಡಕ್ಷರವಲ್ಲ ಬದಲಾಗಿ ಸುಳ್ಳು, ವಂಚನೆ, ದ್ರೋಹ ಮಾತ್ರ ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ.
ಕೋವಿಡ್ ನ ಈ ಸಂಕಷ್ಟದ ಸಮಯದಲ್ಲೂ ವ್ಯಾಕ್ಸಿನ್ ಗೆ ಕಮಿಷನ್ ಪಡೆಯುವ ಸಂಬಂಧ ನಿನ್ನೆ ಆಡಿಯೋ ಒಂದು ವೈರಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿ ಸಂಸದ ತೇಜಸ್ವಿ ಸೂರ್ಯ ಕಾಲೆಳೆದಿದ್ದು, ಎದೆ ಬಗೆದರೆ ಎರಡಕ್ಷರ ಸಿಗಲ್ಲ ಎಂಬ ತೇಜಸ್ವಿ ಸೂರ್ಯರ ಮಾತನ್ನು ಇಂದು ಅವರಿಗೆಯೇ ನೀಡಿ ತಿರುಗೇಟು ನೀಡಿದ್ದು, ತೇಜಸ್ವಿ ಸೂರ್ಯರ ಎದೆಯಲ್ಲಿ ಸುಳ್ಳು, ವಂಚನೆ, ದ್ರೋಹ ಮಾತ್ರವಿದೆ ಎಂದು ಪರೋಕ್ಷವಾಗಿ ಹೇಳಿದೆ.
ಈ ಸಂಬಂಧ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಅವರ ಮನೆಯ ಕಪಾಟು ತಡಕಿದರೆ ಸಿಗುವುದು ಬಡವರ ಲಸಿಕೆ ಮಾರಿಕೊಂಡ ಪಾಪದ ಹಣ ಎಂದು ಹೇಳಿದೆ.
‘ಚಿಕ್ಕಪ್ಪ, ಮಗ ಸೇರಿಕೊಂಡು ಬೆಡ್ ಬ್ಲಾಕಿಂಗ್ ದಂಧೆಯಲ್ಲದೆ ಈಗ ಲಸಿಕೆ ಕಳ್ಳತನದ ದಂಧೆಯನ್ನೂ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಹೇಳಿದೆ.