ಸರ್ಜನ್ ಗಳು ಹೆಡ್ಗೆವಾರ್, ಉಪಾಧ್ಯಾಯ ಪುಸ್ತಕ ಇಟ್ಟುಕೊಂಡು ಆಪರೇಶನ್ ಮಾಡುವರು: ಕಾಂಗ್ರೆಸ್ ವ್ಯಂಗ್ಯ

Prasthutha|

ಭೋಪಾಲ್: ಮಧ್ಯ ಪ್ರದೇಶ ರಾಜ್ಯದಲ್ಲಿ ಇನ್ನು ಮುಂದೆ ಸರ್ಜನ್ಗಳು ಆರೆಸ್ಸೆಸ್ನ ಹೆಡ್ಗೆವಾರ್ ಮತ್ತು ಉಪಾಧ್ಯಾಯರ ಪುಸ್ತಕ ಇಟ್ಟುಕೊಂಡು ಆಪರೇಶನ್ ಮಾಡುವ ಕಾಲ ಬರುತ್ತದೆ ಎಂದು ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ವರ್ಮಾ ವ್ಯಂಗ್ಯವಾಡಿದ್ದಾರೆ.
ಮಧ್ಯ ಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಎಂಬಿಬಿಎಸ್ ಕಲಿಯುವವರಿಗೆ ಆರೆಸ್ಸೆಸ್ ಸ್ಥಾಪಕ ಕೇಶವ ಹೆಡ್ಗೆವಾರ್ ಮತ್ತು ಜನಸಂಘ ಸ್ಥಾಪಕ ದೀನ ದಯಾಳ್ ಉಪಾಧ್ಯಾಯರ ಪಾಠ ಕಡ್ಡಾಯ ಕಲಿಸಲಾಗುವುದು ಎಂದು ನಿನ್ನೆ ತಿಳಿಸಿದ್ದರು.


ಸಜ್ಜನ್ ಸಿಂಗ್ ವರ್ಮಾ ಮುಂದುವರಿದು ಬಿಜೆಪಿಯ ವ್ಯಾಪಂ ಹಗರಣದಿಂದಾಗಿ ಮಧ್ಯ ಪ್ರದೇಶದ ವೈದ್ಯರು ದೇವದೂತರಾಗುವ ಬದಲು ದೆವ್ವಗಳಾಗಿದ್ದಾರೆ ಎಂದು ದೂರಿದರು. ಶಸ್ತ್ರ ಚಿಕಿತ್ಸೆಯ ಚೂರಿ ಕತ್ತರಿ ಮೇಲೆ ಅವರ ಫೋಟೋ ಹಾಕಬಹುದು. ಇಂಥ ಪಾಠದಿಂದ ದೇಶ ವಿಭಜನೆಯತ್ತ ಸಾಗುತ್ತದೆ ಎಂದು ವರ್ಮಾ ಹೇಳಿದರು.

- Advertisement -