ಶಾಲಾ ಮಕ್ಕಳ ಬ್ಯಾಗ್’ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಸಿಗರೇಟ್ ಪತ್ತೆ!

Prasthutha|

ಬೆಂಗಳೂರು: ತರಗತಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ತರುತ್ತಾರೆ ಎಂಬ ದೂರು ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಬ್ಯಾಗ್’ಗಳನ್ನು ಚೆಕ್ ಮಾಡಿದ ಶಿಕ್ಷಕರಿಗೆ ಆಘಾತ ಕಾದಿತ್ತು.

- Advertisement -


8, 9 ಮತ್ತು 10ನೇ ತರಗತಿಯ ಕೆಲ ವಿದ್ಯಾರ್ಥಿಗಳ ಬ್ಯಾಗ್’ಗಳಲ್ಲಿ ಕಾಂಡೋಮ್’ಗಳು, ಗರ್ಭ ನಿರೋಧಕ ಮಾತ್ರೆಗಳು, ಲೈಟರ್, ಸಿಗರೇಟ್’ಗಳು, ವೈಟ್’ನರ್ ಗಳು ಮುಂತಾದ ವಸ್ತುಗಳು ಸಿಕ್ಕಿವೆ. ಒಂದು ಶಾಲೆಯ ವಿದ್ಯಾರ್ಥಿಯ ಬ್ಯಾಗ್’ನಲ್ಲಿ ಗರ್ಭ ನಿರೋಧಕ ಮಾತ್ರೆ (ಐ-ಪಿಲ್) ಕಂಡುಬಂದಿದೆ. ನೀರಿನ ಬಾಟಲಿಗಳಲ್ಲಿ ಅಲ್ಕೋಹಾಲ್ ಇರುವುದೂ ಪತ್ತೆಯಾಗಿದೆ.


ಈ ವಿಷಯವನ್ನು ಈಗಾಗಲೇ ಶಿಕ್ಷಕರು ಸಂಬಂಧಪಟ್ಟ ಪಾಲಕರಿಗೆ ತಿಳಿಸಿದ್ದಾರೆ. ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವ ಬದಲು ಅವರಿಗೆ ಕೌನ್ಸೆಲಿಂಗ್ ಕೊಡಿಸಲು ಶಾಲೆ ಆಡಳಿತ ಮಂಡಳಿಯವರು ಮುಂದಾಗಿದ್ದಾರೆ.

Join Whatsapp