ಕೋಮು ಪ್ರಚೋದನಕಾರಿ ಭಾಷಣ: ಆಂದೋಲಶ್ರೀ ವಿರುದ್ಧ ದೂರು ದಾಖಲು

Prasthutha|

ಯಾದಗಿರಿ: ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲಶ್ರೀ ವಿರುದ್ಧ ಶಹಾಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -


ಅಕ್ಟೋಬರ್ 3 ರಂದು ಯಾದಗಿರಿಯ ಶಹಾಪುರದ ನಗರದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆದಿತ್ತು.


ನಿಮ್ಮ ಹತ್ತಿರ ಮಂಡ್ ತಲ್ವಾರ್ ಇರಬಹುದು, ಆ ಮಂಡ್ ತಲ್ವಾರ್ನಿಂದ ನಮ್ಮನ್ನು ಹೆದುರಿಸಲು ಬಂದರೇ, ನಮ್ಮಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಖಡ್ಗ ಇದೆ, ಛತ್ರಪತಿ ಶಿವಾಜಿ ಮಹಾರಾಜರ ಖಡ್ಗ ಇದೆ ಏಕ್ ಮಾರ್ ದೋ ತುಕಡಾ. ಹೊಡೆದರೆ ಒಂದು ದೇಹದ ಒಂದಯ ಪಾಕಿಸ್ತಾನಕ್ಕೆ ಹೋಗಿ ಬೀಳಬೇಕು, ಮತ್ತೊಂದು ದೇಹ ಬಾಂಗ್ಲಾದೇಶದಲ್ಲಿ ಬೀಳಬೇಕು. ಹಿಂದುಗಳನ್ನು ಕೆಣಕಬೆಡಿ, ಹಿಂದೂಗಳನ್ನ ಕೆಣಕಿದರೇ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ ಎಂದು ಆಂದೋಲ ಶ್ರೀ ಕೋಮು ಪ್ರಚೋದನೆ ಭಾಷಣ ಮಾಡಿದ್ದರು.