ಹಾಸನ: ನದಿಗೆ ಹಾರಿ ಗುತ್ತಿಗೆದಾರ ಆತ್ಮಹತ್ಯೆ

Prasthutha|

ಹಾಸನ: ಹೇಮಾವತಿ ನದಿಗೆ ಜಿಗಿದು ಗುತ್ತಿಗೆದಾರರೊಬ್ಬರು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದಿದೆ.

- Advertisement -


ಹಾಸನ ಜಿಲ್ಲೆ ಹೊಳೆನರಸೀಪುರದ ಪ್ರಥಮ ದರ್ಜೆ ಗುತ್ತಿಗೆದಾರ ಕೆ ಸತ್ತಾರ್(79) ಹೇಮಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಹೊಳೆನರಸೀಪುರ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದ ಕೆ ಸತ್ತಾರ್(79) ವೈಯಕ್ತಿಕ ಸಮಸ್ಯೆಗಳಿಂದ ನೊಂದಿದ್ದರು. ಬೇರೆಯವರಿಗೆ ಕೊಟ್ಟಿದ್ದ ಲಕ್ಷಾಂತರ ರೂಪಾಯಿ ಹಣ ವಾಪಸ್ ಬಂದಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಶವ ಪತ್ತೆಯಾಗದ ಹಿನ್ನಲೆ ಇನ್ನೂ ಕೂಡ ಕಾರ್ಯಾಚರಣೆ ಮುಂದುವರೆದಿದೆ. ಕುಂದಾಪುರದ ಮುಳುಗು ತಜ್ಞರು ಸತ್ತಾರ್ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.