ಗಾಝಿಯಾಬಾದ್‌ ವೃದ್ಧನ ಹಲ್ಲೆ ವೀಡಿಯೊ ಪ್ರಕರಣ : ನಟಿ ಸ್ವರಾ ಭಾಸ್ಕರ್‌, ಟ್ವಿಟರ್‌ ಇಂಡಿಯಾ ವಿರುದ್ಧ ಮತ್ತೊಂದು ಹೊಸ ದೂರು

Prasthutha: June 17, 2021

ನವದೆಹಲಿ : ಗಾಝಿಯಾಬಾದ್‌ ವೃದ್ಧನ ಮೇಲೆ ಹಲ್ಲೆ ವೀಡಿಯೊಗೆ ಸಂಬಂಧಿಸಿ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌, ಅರಾಫ ಖಾನುಮ್‌ ಶೆರ್ವಾಣಿ, ಆಸಿಫ್‌ ಖಾನ್‌ ಮತ್ತು ಟ್ವಿಟರ್‌ ಇಂಡಿಯಾದ ಮುಖ್ಯಸ್ಥ ಮನೀಶ್‌ ಮಹೇಶ್ವರಿ ವಿರುದ್ಧ ದೆಹಲಿ ಪೊಲೀಸರು ಮತ್ತೊಂದು ಹೊಸ ದೂರು ಸಲ್ಲಿಕೆಯಾಗಿದೆ.

ದೆಹಲಿಯ ತಿಲಕ್‌ ಮಾರ್ಗ್‌ ಪೊಲೀಸ್‌ ಠಾಣೆಯಲ್ಲಿ ನ್ಯಾಯವಾದಿ ಅಮಿತ್‌ ಆಚಾರ್ಯ ಎಂಬಾತ ದೂರು ಸಲ್ಲಿಸಿದ್ದಾನೆ. ದೂರಿಗೆ ಸಂಬಂಧಿಸಿ ಎಫ್‌ ಐಆರ್‌ ಇನ್ನಷ್ಟೇ ದಾಖಲಾಗಬೇಕಾಗಿದೆ. ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿ ಟ್ವಿಟರ್‌ ಇಂಡಿಯಾ, ನ್ಯೂಸ್‌ ವೆಬ್‌ ಸೈಟ್‌ ʼದ ವೈರ್‌ʼ, ಪತ್ರಕರ್ತರಾದ ಮೊಹಮ್ಮದ್‌ ಝುಬೇರ್‌ ಮತ್ತು ರಾಣಾ ಅಯ್ಯುಬ್‌, ಕಾಂಗ್ರೆಸ್‌ ನಾಯಕ ಶಮಾ ಮೊಹಮ್ಮದ್‌, ಸಲ್ಮಾನ್‌ ನಿಝಾಮಿ, ಮಕ್ಸೂರ್‌ ಉಸ್ಮಾನ ಮತ್ತು ಸಬಾ ನಖ್ವಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ.

ವಯೋವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ʼಜೈ ಶ್ರೀರಾಮ್‌ʼ ಹೇಳುವಂತೆ ಒತ್ತಾಯಿಸಿ ಥಳಿಸಲಾಗಿದೆ ಎನ್ನಲಾದ ವೀಡಿಯೊವೊಂದನ್ನು ಪ್ರಸಾರ ಮಾಡಿದ್ದಾರೆ ಎಂದು ಆಪಾದಿಸಿ ಟ್ವಿಟರ್‌ ಮತ್ತು ಇತರ ಪ್ರಮುಖರ ಮೇಲೆ ಪ್ರಕರಣ ದಾಖಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!