ಬೋರ್ ವೆಲ್ ರಿಪೇರಿ ಮಾಡಲು ಹೋದ ಇಬ್ಬರು ಯುವಕರು ವಿದ್ಯುತ್ ಶಾಕ್ ಗೆ ಬಲಿ

Prasthutha|

ಶಿವಮೊಗ್ಗ: ಜಮೀನಿನಲ್ಲಿ ಬೋರ್ ವೇಲ್ ರಿಪೇರಿ ಮಾಡಲು ಹೋಗಿ ವಿದ್ಯುತ್ ಶಾಕ್ ನಿಂದ ಇಬ್ಬರು ಯುವಕರ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.  ಹಾರೋಗೊಪ್ಪ ಗ್ರಾಮದ ಇಬ್ಬರು ಯುವಕರು ತಮ್ಮ ಜಮೀನಿನಲ್ಲಿಯೇ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆ.

- Advertisement -

ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಬಿ ‌ಕ್ಯಾಂಪ್ ನ ನಿವಾಸಿಗಳಾದ ಶಶಿಕುಮಾರ್ ನಾಯ್ಕ್ (32) ಶೇಖರ್‌ ನಾಯ್ಕ್ (36) ಮೃತ ಯುವಕರು.

ತಮ್ಮ ಜಮೀನಿನಲ್ಲಿ ಬೋರ್ ವೆಲ್ ರಿಪೇರಿ ಮಾಡಲು ಹೋಗಿ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

- Advertisement -

ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Join Whatsapp