ಬೆಂಗಳೂರು: ಆರ್ಯ ಈಡಿಗ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಹೇಳನ ಮಾಡಿದ ಆರೋಪದ ಮೇಲೆ ಲೇಖಕ ರಾಮಚಂದ್ರ ಗುಹಾ ವಿರುದ್ಧ ದೂರು ದಾಖಲಾಗಿದೆ.
‘ಇಂಡಿಯಾ ಆಪ್ಟರ್ ಗಾಂಧಿ’ ಕೃತಿಯಲ್ಲಿ ಆರ್ಯ ಈಡಿಗ ಸಮಾಜ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಅಂಶ ಪ್ರಸ್ತಾಪಿಸಿ ಅವಹೇಳನ ಮಾಡಲಾಗಿದೆ ಎಂದು ಪ್ರಣವಾನಂದ ಸ್ವಾಮೀಜಿ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ನೀಡುವುದರ ಜೊತೆಗೆ ಆ ಪುಸ್ತಕ ಮುಟ್ಟುಗೋಲು ಹಾಕುವಂತೆ ಕೂಡ ದೂರಿನಲ್ಲಿ ತಿಳಿಸಲಾಗಿದೆ.