ಅಕ್ಕಿ ಖರೀದಿಯಲ್ಲಿ ಗುತ್ತಿಗೆದಾರರಿಂದ ಕಮಿಷನ್‌ ಫಿಕ್ಸ್‌: ಮಾಜಿ ಸಿಎಂ ಬೊಮ್ಮಾಯಿ

Prasthutha|

ಬೆಳಗಾವಿ: ಅಕ್ಕಿ ಖರೀದಿಯಲ್ಲಿ ಹುನ್ನಾರ ನಡೆದಿದೆ. ಏನಾಗಿದೆ ಎಂಬುದರ ಬಗ್ಗೆ ಕೆಲವೇ ದಿನಗಳಲ್ಲಿ ಬಣ್ಣ ಬಯಲಾಗಲಿದೆ. ಬೆಂಕಿ ಹತ್ತಿದಾಗ ಗಳ ಎಣಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ನಮ್ಮ ಮೇಲೆ ಕಮಿಷನ್‌ ಗೂಬೆ ಕೂರಿಸಿದ್ದ ಕಾಂಗ್ರೆಸ್‌ ಈಗ ಗುತ್ತಿಗೆದಾರರಿಂದ ಕಮಿಷನ್‌ ಪರ್ಸೆಂಟೇಜ್‌ ಫಿಕ್ಸ್‌ ಮಾಡಿಕೊಂಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.

- Advertisement -

ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲವೆಂದು ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಪ್ರತಿಭಟನೆ ಮಾಡಲು ಕಾಂಗ್ರೆಸ್‌ಗೆ ಯಾವ ನೈತಿಕತೆ ಇಲ್ಲ. ಸರ್ಕಾರದಲ್ಲಿ ಇದ್ದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಅಕ್ಕಿ ಖರೀದಿಯಲ್ಲಿ ಹುನ್ನಾರ ಆಗಿದೆ. ಏನಾಗಿದೆ ಎಂಬುದು ನನಗೆ ಗೊತ್ತು. ಬಣ್ಣ ಬಯಲಾಗಲಿದೆ ಎಂದರು.

ಕಮಿಷನ್‌ ಹೆಸರಲ್ಲಿ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದ ಕಾಂಗ್ರೆಸ್‌ ಈಗ ಪರ್ಸೆಂಟೇಜ್‌ ಫಿಕ್ಸ್‌ ಮಾಡುತ್ತಿದೆ. ಯಾವ ಮಂತ್ರಿ ಗುತ್ತಿಗೆದಾರನಿಗೆ ಕರೆದು ಏನು ಹೇಳಿದ್ದಾರೆ ಎಂಬುದು ಗೊತ್ತು. ಅಧಿಕಾರ ಇಲ್ಲದೆ ಹಸಿದು ಕುಳಿತಿದ್ದ ದೆಹಲಿಯವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ. ಅಧಿಕಾರ ಹಿಡಿದು ಒಂದೇ ತಿಂಗಳಲ್ಲಿ ಎಲ್ಲ ಕಡೆಗಳಿಂದಲೂ ಪರ್ಸಂಟೇಜ್‌ ಫಿಕ್ಸ್‌ ಆಗುತ್ತಿದೆ ಎಂದರು.

Join Whatsapp