ಸಿರಿಯಾ ಮೇಲೆ ವೈಮಾನಿಕ ದಾಳಿ: 9 ಸಾವು; 30ಕ್ಕೂ ಅಧಿಕ ಮಂದಿಗೆ ಗಾಯ

Prasthutha|

ಡಮಾಸ್ಕಸ್‌: ವಾಯುವ್ಯ ಸಿರಿಯಾದ ತರಕಾರಿ ಮಾರುಕಟ್ಟೆಯೊಂದರ ಮೇಲೆ ಭಾನುವಾರ ವೈಮಾನಿಕ ದಾಳಿ ನಡೆದಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ, 30ಕ್ಕೂ ಅಧಿಕಮಂದಿ ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ರಷ್ಯಾದ ಪಡೆಗಳೇ ಈ ದಾಳಿ ನಡೆಸಿವೆ ಎನ್ನುವ ಮಾತು ಕೇಳಿಬಂದಿದೆ. ಆದರೆ ರಷ್ಯಾ ಅಥವಾ ಸಿರಿಯಾ ಸರ್ಕಾರ ಯಾವುದೂ ದಾಳಿ ಕುರಿತು ಪ್ರತಿಕ್ರಿಯೆ ನೀಡಿಲ್ಲ. ದಾಳಿಯ ತೀವ್ರತೆ ಹೆಚ್ಚಿರುವುರಿಂದ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಸ್ಥಳೀಯಾಡಳಿತ ಸಂಸ್ಥೆ ತಿಳಿಸಿದೆ