ಪಂಜಾಬ್ ಗೆ ಬನ್ನಿ, ಸರ್ದಾರ್ ಗಳು ನಿಮಗೆ ರಕ್ಷಣೆ ಕೊಡುತ್ತಾರೆ: ಬಿಲ್ಕೀಸ್ ಬಾನುಗೆ ಗಾಯಕ ರಬ್ಬಿ ಶೆರ್ಗಿಲ್

Prasthutha|

ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಹತ್ಯೆಯ ಬಗ್ಗೆ ‘ಬಿಲ್ಕ್ವಿಸ್’ ಎಂಬ ಹಾಡನ್ನು ಬರೆದಿರುವ ಗಾಯಕ ರಬ್ಬಿ ಶೆರ್ಗಿಲ್, ಈ ವರ್ಷದ ಆಗಸ್ಟ್ 15 ರಂದು 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

“ನಾನು ಬಲ್ಕಿಸ್ ಗೆ ಹೇಳಬಯಸುತ್ತೇನೆ, ಪಂಜಾಬಿಗೆ ಬನ್ನಿ, ನಮ್ಮ ರಕ್ತದ ಕೊನೆಯ ಹನಿಯವರೆಗೆ ನಾವು ನಿನ್ನನ್ನು ರಕ್ಷಿಸುತ್ತೇವೆ. ಸರ್ದಾರ್ ಗಳು ನಿಮ್ಮನ್ನು ನೋಡಿಕೊಳ್ಳುತ್ತಾರೆ.

ಮತ್ತು ಇದು ಕೇವಲ ನನ್ನ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ. ಅವಳ ನೋವು ನಮ್ಮ ನೋವು ಮತ್ತು ಅವಳು ಒಬ್ಬಂಟಿಯಲ್ಲ ಎಂದು ಅವಳಿಗೆ ತಿಳಿಸಲು ಬಯಸುತ್ತೇನೆ” ಎಂದು ಶೆರ್ಗಿಲ್ ಹೇಳಿದ್ದಾರೆ.

- Advertisement -

ನ್ಯಾಯವಿಲ್ಲದೆ ಭಾರತವು ಟೊಳ್ಳಾದ ಸಮಾಜವಾಗಿದೆ. ದೇಶದಲ್ಲಿ ನೈತಿಕತೆ ಮತ್ತು ನಾಯಕತ್ವದ ಬಿಕ್ಕಟ್ಟಿದೆ ಎಂದು ಅವರು ಹೇಳಿದರು.

2002ರಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ ಆಕೆಯ ಕುಟುಂಬವನ್ನು ಕೊಲೆ ಮಾಡಿದ 11 ಮಂದಿ ಆರೋಪಿಗಳನ್ನು ಗುಜರಾತ್ ಸರ್ಕಾರದ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಮಾಡಿತ್ತು.



Join Whatsapp