ಕೋಮು ಸೌಹಾರ್ದತೆ ಸೃಷ್ಟಿಸಿದರಷ್ಟೇ ಕರಾವಳಿ ಅಭಿವೃದ್ಧಿಗೊಳ್ಳಲು ಸಾಧ್ಯ: ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್

Prasthutha|

ಮಂಗಳೂರು: ಕೋಮು ಸೌಹಾರ್ದತೆ ಸೃಷ್ಟಿಸಿದರಷ್ಟೇ ಕರಾವಳಿ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ, CWC ಸದಸ್ಯ ಡಾ. ನಾಸೀರ್ ಹುಸೇನ್ ಹೇಳಿದ್ದಾರೆ.

- Advertisement -


ಮಂಗಳೂರಿನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಮು ಸೌಹಾರ್ದತೆ ಮತ್ತು ಅಭಿವೃದ್ಧಿ ಕಾಂಗ್ರೆಸ್ ಮಂತ್ರ. ಹಿಂಸೆ ಮಾಡುವವರನ್ನು ನಮ್ಮ ಸರಕಾರ ಸಹಿಸಲ್ಲ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕರಾವಳಿ ಕರ್ನಾಟಕದಲ್ಲಿ ಕ್ರಾಂತಿಕಾರಕ ಅಭಿವೃದ್ಧಿ ಆಗಿತ್ತು. ಬಿಜೆಪಿ ಬಂದು ಕೋಮುಧ್ರುವೀಕರಣ ಮಾಡಿದ ಬಳಿಕ ಕರಾವಳಿ ಅಭಿವೃದ್ಧಿ ಆಗಿಲ್ಲ. ಕೋಮುವಾದದಿಂದ ಹೊರಬಂದು ಕರಾವಳಿ ಪ್ರದೇಶ ಈ ಹಿಂದಿನ ಅಭಿವೃದ್ಧಿ ರಾಜಕಾರಣಕ್ಕೆ ಬರಬೇಕು. ಕೋಮು ಸೌಹಾರ್ದತೆ ಸೃಷ್ಟಿಸಿದರಷ್ಟೇ ಕರಾವಳಿ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದರು.


5 ರಾಜ್ಯಗಳ ಚುನಾವಣೆ ಮತ್ತು ಮುಂದಿನ ಲೋಕಸಭಾ ಚುನಾವಣೆ ಬಗ್ಗೆ CWC ಎರಡು ಸಲ ಸಭೆ ನಡೆದಿದೆ. ಚುನಾವಣೆ ಎದುರಿಸಲು ಬಗ್ಗೆ ಸಜ್ಜಾಗಿದ್ದೇವೆ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಕಡೆ ಜಯ ಗಳಿಸಲಿದೆ. ಮೋದಿ ಸರಕಾರದ ವಿರುದ್ಧ ನಾವು ಸೆಟ್ ಮಾಡುತ್ತಿರುವ ನರೇಟಿವ್ ಗಳು ಸಕ್ಸಸ್ ಆಗುತ್ತಿದೆ. ಭಾರತ್ ಜೋಡೋ ಪಾದಯಾತ್ರೆ ಬಳಿಕ ಕಾಂಗ್ರೆಸ್ ಶಕ್ತಿ ವೃದ್ಧಿಸಿದೆ. ಕರ್ನಾಟಕ ಮತ್ತು ಹಿಮಾಚಲ ಗೆದ್ದಿದ್ದೇವೆ. ಕರ್ನಾಟಕದಲ್ಲಿ ನಮ್ಮ ಗೆಲುವಿಗೆ ನಾವು ಸೆಟ್ ಮಾಡಿರುವ ನರೇಟಿವ್ಗಳು ಕಾರಣವಾಗಿದೆ ಎಂದರು.
ಇಂಡಿಯಾ ಮೈತ್ರಿಕೂಟ ರಚನೆಯಾದ ಮೇಲೆ ಮೋದಿಯವರಿಗೆ ಕಷ್ಟ ಆಗಿದೆ. 2024ರಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ, ಅಧಿಕಾರ ಹಿಡಿಯಲಿದೆ ಎಂದರು.